Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆಯ ವೈದ್ಯ ಡಾ.ಸುರೇಶ್ ಹನಗವಾಡಿಗೆ ರಾಷ್ಟ್ರಪತಿಯಿಂದ ಆಹ್ವಾನ : ತೆಂಡೂಲ್ಕರ್ ಜೊತೆಗೆ ಕೂತು ಊಟ ಮಾಡಲಿರುವ ವೈದ್ಯ..!

---Advertisement---

ದಾವಣಗೆರೆ: ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿದೆ. ರಾಷ್ಟ್ರಪತಿಗಳ ಔತಣಕೂಟದಲ್ಲಿ ರಾಜ್ಯದ ಹಲವು ಸಾಧಕರಿಗೂ ಆಹ್ವಾನ ಬಂದಿದೆ. ಅದರಲ್ಲಿ ದಾವಣಗೆರೆಯ ವೈದ್ಯ ಡಾ.ಸುರೇಶ್ ಹಗನವಾಡಿ ಕೂಡ ಒಬ್ಬರು. ಅಂಚೆ ಕಚೇರಿಯ ಮುಖ್ಯಾಧಿಕಾರಿಗಳೇ ಈ ಆಹ್ವಾನ ಪತ್ರಿಕೆಯನ್ನು ವೈದ್ಯ ಡಾ.ಸುರೇಶ್ ಅವರಿಗೆ ತಲುಪಿಸಿದ್ದಾರೆ.

ರಾಷ್ಟ್ರಪತಿಗಳ ಈ ಔತಣಕೂಟ ಸಮಾರಂಭಕ್ಕೆ ದೇಶದ 528 ಗಣ್ಯರಿಗೆ ಕರೆ ಬಂದಿದೆ. ಇದೇ ಜನವರಿ 26ರಂದು ಗಣರಾಜ್ಯೋತ್ಸವದ ಸಂಭ್ರಮದಲ್ಲಿ ನಡೆಯಲಿದೆ. ಈ ಔತಣಕೂಟದಲ್ಲಿ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರು ಭಾಗಿಯಾಗಲಿದ್ದು, ಅವರ ಜೊತೆಗೆ ಕೂತು ಡಾ.ಸುರೇಶ್ ಕೂಡ ಊಟ ಮಾಡಲಿದ್ದಾರೆ. ಡಾ.ಸುರೇಶ್ ಹನಗವಾಡಿ ಹಿಮೋಫಿಲಿಯಾ ಪೀಡಿತರ ಬಾಳಿನ ಆಶಾ ಕಿರಣ. ಇತ್ತೀಚೆಗೆ ರಾಷ್ಟ್ರಪತಿಗಳಿಂದ ಶ್ರೇಷ್ಠಾ ದಿವಾಂಜನ್ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ದಾವಣಗೆರೆಯ ಹಿಮೋಫಿಲಿಯಾ ಸಂಸ್ಥೆಯ ಅದ್ಯಕ್ಷರಾದ ಡಾ.ಸುರೇಶ್ ಹನಗವಾಡಿ ಸ್ವತಃ ಹಿಮೋಫಿಲಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲಿದವರು.

ಡಾ.ಸುರೇಶ್ ದಾವಣಗಡರೆಯ ಜೆಜೆಎಂ ಮೆಡಿಕಲ್ ಕಾಲೇಜು ಫೇಥಾಲಜಿ ವಿಭಾಗದ ಪ್ರಾಧ್ಯಾಪಕರು ಹೌದು. ಹಿಮೋಫಿಲಿಯಾ ಪೀಡಿತರಾದ ಡಾ.ಸುರೇಶ್ ಅವರು ಕಳೆದ ನಾಲ್ಕು ದಶಕಗಳಿಂದ ಹಿಮೋಫಿಲಿಯಾ ಪೀಡಿತರಿಗಾಗಿ ಮಾಡಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಇದೇ ಕಾರಣಕ್ಕೆ ಇದೀಗ ರಾಷ್ಟ್ರಪತಿಗಳ ಔತಣಕೂಟಕ್ಕೆ ಡಾ.ಸುರೇಶ್ ಹನಗವಾಡಿಗೆ ಆಹ್ವಾನ ಬಂದಿದೆ. ಡಾ.ಸುರೇಶ್ ಅವರಿಗೆ ಬಂದ ಆಹ್ವಾನ ಪತ್ರಿಕೆಯೂ ಕೂಡ ಬಹಳ ವಿಶೇಷವಾಗಿದೆ. ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯ ಬಿಂಬಿಸುವ ರೀತಿಯಲ್ಲಿ ಆಹ್ವಾನ ಪತ್ರಿಕೆ ವಿನ್ಯಾಸಗೊಳಿಸಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment