Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಗಣೇಶ ಹಬ್ಬ ಆಚರಣೆ ಪೂರ್ಣಗೊಳ್ಳುವವರೆಗೆ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶ

---Advertisement---

ದಾವಣಗೆರೆ.ಸೆಪ್ಟೆಂಬರ್.16: ಜಿಲ್ಲೆಯಾದ್ಯಂತ ಕಾನೂನು ಸುವ್ಯವ್ಥೆಗೆ ಧಕ್ಕೆಯುಂಟಾಗದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಸೌಹರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 14 ರಿಂದ ಪ್ರತಿಷ್ಠಾಪನೆಯಾಗುವ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ ಹಬ್ಬದ ಮೆರವಣಿಗೆಯಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಶಬ್ದಗಳನ್ನು ಹೊರಸೂಸುವ ಡಿ.ಜಿ ಸಿಸ್ಟಂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.

ಡಿಜೆ ಸಿಸ್ಟಂ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ , ವಯಸ್ಕರಿಗೆ , ಹೃದಯ ಸಂಬಂಧಿತ ಖಾಯಿಲೆ ಇರುವವರಿಗೆ , ನವಜಾತ ಶಿಶುಗಳಿಗೆ ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರಿಂದ , ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ Noise Pollution (Regulation & Control) Rule-2000  ನಿಯಮದನುಸಾರ ಶಬ್ದ ಮಾಲಿನ್ಯದ  ಮಾನದಂಡಗಳನ್ನಯ ನಿಷೇಧಿಸಿದೆ.

ಶಬ್ದ ಮಾಲಿನ್ಯದ  ಮಾನದಂಡಗಳನ್ನಯ ಶಬ್ದದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿ ಅನುಮತಿಯನ್ನು ನೀಡಬಹುದು. ಇತರೆ ಜಿಲ್ಲೆಗಳಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಡಿ.ಜೆ ಸಿಸ್ಟಂ ತಂದು ಜಿಲ್ಲೆಯಲ್ಲಿ ಬಳಸುವುದನ್ನು ನಿಷೇಧಿಸಿದೆ.  ಊಪರ್ಸ್ ಮತ್ತು ಸಬ್ ಊಪರ್ಸ್ ಬಳಕೆ ಮಾಡಿಕೊಳ್ಳಬಹುದು,  ಡಿ.ಜೆ ಗಳಲ್ಲಿ ಬಳಸಲಾಗುವ ಹೆಚ್ಚಿನ ಶಬ್ದ ಹೊರಸೂಸುವ Pressure Measurement  ಹಾಗೂ ಇತರೆ ಹೆಚ್ಚಿನ ಶಬ್ದಗಳನ್ನು ವಿಶೇಷವಾಗಿ ಹೊರಸೂಸುವ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.  ಮಾನದಂಡಗಳನ್ನು ಡಿ.ಜೆ ಬಳಕೆದಾರರು ಮತ್ತು ಆಯೋಜಕರು ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್‌ ಇಲಾಖೆಯವರು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದ್ದಾರೆ.

Join WhatsApp

Join Now

Join Telegram

Join Now