Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಕೆಟ್ಟ ಕಮೆಂಟ್ ಕಾಟ..!

---Advertisement---

ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೆಟ್ಟ ಕಮೆಂಟ್ ಗಳು ಬಂದ ಬಗ್ಗೆ ಎಲ್ಲರಿಗೂ ಗಿತ್ತು. ಆ ಕಮೆಂಟ್ ಗಳನ್ನೆಲ್ಲ ಇಟ್ಟುಕೊಂಡು ರಮ್ಯಾ ನೇರವಾಗಿ ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ದೂರು ನೀಡಿ ಬಂದಿದ್ದರು. ಆಮೇಲೆ ಪೊಲೀಸರು ಕೂಡ ಆರೋಪಿಗಳನ್ನ ಬಂಧಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಕೆಟ್ಟ ಕಮೆಂಟ್ ಗಳನ್ನ ಎದುರಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ನನ್ನು ಟಾರ್ಗೆಟ್ ಮಾಡಲಾಗಿದೆ. ನಿಂದನೆ ಮಾಡಿ ಕಮೆಂಟ್ ಗಳನ್ನ ಹಾಕಲಾಗುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಿ ಅಂತ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರವನ್ನ ಬರೆದಿದೆ. ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಈ ಪತ್ರ ಬರೆದಿದ್ದಾರೆ. ಕ್ರಮದ ಬಗ್ಗೆ ಹದಿನೈದು ದಿನದಳಿ ವರದಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ನಾಗಲಕ್ಷ್ಮೀ ಚೌಧರು ಅವರು, ನಿನ್ನೆ ಭಾಸ್ಕರ್ ಪ್ರಸಾದ್ ಅವರು ವಿಜಯಲಕ್ಷ್ಮೀ ದರ್ಶನ್ ಅವರ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನ ಮಾಡ್ತಾ ಇದ್ದಾರೆ. ರಮ್ಯಾ ಅವರಿಗೆ ಹೇಗೆ ಮಾಡುದ್ರೋ ಅದೇ ರೀತಿಯ ಕಮೆಂಟ್ ಗಳನ್ನ ಹಾಕ್ತಾ ಇದ್ದಾರೆ. ಇದು ವಿಜಯಲಕ್ಷ್ಮೀ, ರಮ್ಯಾ ಅಂತಲ್ಲ ಯಾವುದೇ ಹೆಣ್ಣು ಮಕ್ಕಳ ಬಗ್ಗೆಯೂ ಅವಹೇಳನಕಾರಿ ಪದಗಳನ್ನ, ಅವರ ಘನತೆಗೆ ಚ್ಯುತಿ ಬರುವಂತೆ ಬರೆದಿದ್ದೇ ಆದರೆ ಈಗಾಗಲೇ ಎಂಟು ಜನ ಜೈಲಿನಲ್ಲಿದ್ದಾರೆ. ನೀವೂ ಜೈಲು ಸೇರುತ್ತೀರಿ. ಸೋಷಿಯಲ್‌ಮೀಡಿಯಾದಲ್ಲಿ ಆ ರೀತಿಯ ಪದ ಬಳಸಬೇಡಿ. ಚರ್ಚೆ ಇದ್ದರೆ ಆರೋಗ್ಯ ರೀತಿ ಚರ್ಚೆ ಮಾಡಿ. ಹೆಣ್ಣು‌ ಮಕ್ಕಳಿಗೆ ಅಷ್ಟು ಕೆಟ್ಟ ಪದಗಳನ್ನ ಬಳಸಬೇಡಿ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment