Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಪರದಾಟ : ಕೊಠಡಿಯಿಂದ ಕೂಡ ಹೊರಗೆ ಬರುವಂತಿಲ್ಲ..!

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒಂದು ಸಾರಿ ಜೈಲಿಗೆ ಹೋಗಿ ಬಂದಿದ್ದ‌ನಟ ದರ್ಶನ್, ಇನ್ಮೇಲೆ ರಿಲ್ಯಾಕ್ಸ್ ಅಂತ ಅಂದುಕೊಂಡಿದ್ದರು. ಆದರೆ ಈಗ ಮತ್ತೆ ಜೈಲು ಸೇರುವ ಪರಿಸ್ಥಿತಿಯೇ ಬಂದೊದಗಿದೆ. ಜಾಮೀನು ರದ್ದಾದ ಹಿನ್ನೆಲೆ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಯಾಕಂದ್ರೆ ದರ್ಶನ್ ಅವರಿಗೆ ಅವರಿರುವ ಕೊಠಡಿಯಿಂದ ಹೊರಗೆ ಬರುವುದಕ್ಕೇನೆ ಬಿಡ್ತಾ ಇಲ್ಲ ಎಂಬುದೇ ಈಗಿನ ಟೆನ್ಶನ್.

ಕಳೆದ ಬಾರಿ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್, ಅಲ್ಲಿ ಪರಿಚಯದವರ ಜೊತೆಗೂಡಿ ಸಿಗರೇಟ್ ಸೇದುತ್ತಾ, ಹರಟೆ ಹೊಡೆಯುತ್ತಾ ಕೂತ ಫೋಟೋ ವೈರಲ್ ಆಗಿತ್ತು. ಹೀಗಾಗಿಯೇ ಈಗಿರುವ ಕೊಠಡಿಯಿಂದ ಹೊರಗೆ ಬರುವುದಕ್ಕೂ ಅನುಮತಿ ನೀಡಿಲ್ಲ. ಜೈಲಿನ ಸಿಬ್ಬಂದಿ ದರ್ಶನ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಕೊಠಡಿಯೊಳಗೆ ವಾಕಿಂಗ್, ಟಾಕಿಂಗ್ ಎಲ್ಲವು ಆಗಿದೆ.

ದರ್ಶನ್ ಕಾವಾಲಿಗಾಗಿ ಇಟ್ಟಿರುವ ಸಿಬ್ಬಂದಿಯ ಬಳಿ ಇರುವ ಕ್ಯಾಮೆರಾವನ್ನು ಜೈಲು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಕೊಠಡಿಯಲ್ಲಿ ವಾಕಿಂಗ್ ಮಾಡುವುದಿ, ಮಲಗುವುದಷ್ಟೇ ಕಾಣಿಸುತ್ತಿದ್ದು, ಬೇರೆ ಯಾವುದೇ ಬೆಳವಣಿಗೆ ಇಲ್ಲ. ಇನ್ನು ದರ್ಶನ್ ಅವರನ್ನು ನೋಡುವುದಕ್ಕೆ ಇಂದು ಅವರ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದಿದ್ದು, ಅವರಿಗೆ ಬೇಕಾದ ವಸ್ತುಗಳ ಬ್ಯಾಗ್ ಅನ್ನು ತಂದಿದ್ದರು. ದರ್ಶನ್ ಅವರನ್ನು ನೋಡಿ, ಧೈರ್ಯ ತುಂಬಿ ಹೋಗಿದ್ದಾರೆ. ಇದರ ನಡುವೆ ದರ್ಶನ್ ಕುಟುಂಬಕ್ಕೆ ಮತ್ತೊಂದು ಆಘಾತವೆಂದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಆತಂಕ ಕಾಡುತ್ತಿದೆ. ಕಳೆದ ಬಾರಿ ಯಾವ್ಯಾವ ಆರೋಪಿಗಳು ಎಲ್ಲೆಲ್ಲಿ ಇದ್ದರೋ ಅದೇ ಜೈಲಿಗೆ ಕಳುಹಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment