Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮಂಗಳೂರು, ಕದ್ರಿ ಶಾಲೆಯ ಮಕ್ಕಳಿಗೆ ಡಾಬರ್ ಚವನ್ ಪ್ರಾಶ್ ವಿತರಣೆ

---Advertisement---

ಮಂಗಳೂರು: ಶಾಲಾ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ಮಳೆಗಾಲದಲ್ಲಿ ಬರುವಂತಹ ಕಾಯಿಲೆಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಡಾಬರ್ ಚವನ್‌ಪ್ರಾಶ್ ಸಂಸ್ಥೆಯ ವತಿಯಿಂದ ಮಂಗಳೂರಿನ ಗಾಂಧಿ ನಗರ ಸರಕಾರಿ ಶಾಲೆ ಹಾಗೂ ಕದ್ರಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಾಬರ್ ಚವನ್ ಪ್ರಾಶ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಡಾಬರ್ ಚವನ್ ಪ್ರಾಶ್ ಅನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಮಕ್ಕಳು ಸೇರಿದಂತೆ ವಿವಿಧ ಪ್ರಾಯದವರಲ್ಲಿ ದುರ್ಬಲ ರೋಗನಿರೋಧಕ ಶಕ್ತಿ ದೂರವಾಗಿ ರೋಗ ನಿರೋಧಕ ಶಕ್ತಿ ಇಮ್ಮಡಿ ಆಗಲಿದೆ. ಈ ಕಾರಣದಿಂದ ಡಾಬರ್ ಚವನ್ ಪ್ರಾಶ್ ಸಂಸ್ಥೆಯು ಶಾಲಾ ಮಕ್ಕಳಿಗೆ ಉಚಿತವಾಗಿ ಹಂಚಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.

ಪ್ರಾಚೀನ ಆಯುರ್ವೇದ ಪದ್ಧತಿಗಳ ಆಧಾರದ ಮೇಲೆ ಸರಿಯಾದ ಪ್ರಮಾಣದ ಔಷಧಿಗಳನ್ನು ಸೇವಿಸಿದರೆ ದೇಹವನ್ನು ಮಳೆಗಾಳದ ರೋಗಕಾರಕ ಜೀವಾಣುಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಅಲೋಪತಿ ಔಷಧಿಗಳು ರೋಗಗಳನ್ನು ಗುಣಪಡಿಸುವತ್ತ ಗಮನಹರಿಸಿದರೆ, ಪ್ರಾಚೀನ ಭಾರತೀಯ ಗಿಡಮೂಲಿಕೆ ವ್ಯವಸ್ಥೆ ಮತ್ತು ಆಯುರ್ವೇದವು ಆರೋಗ್ಯಕರ ಮತ್ತು ಚೈತನ್ಯಮಯ ಜೀವನಶೈಲಿಯನ್ನು ಪಾಲಿಸುವ ಕಡೆಗೆ ಗಮನಹರಿಸುತ್ತವೆ. ಆಯುರ್ವೇದದ ಎಂಟು ಶಾಖೆಗಳಲ್ಲಿ ಒಂದಾದ ರಸಾಯನ ಚಿಕಿತ್ಸೆಯು, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬೇಕಾದ ಉತ್ತಮ ಸೂತ್ರಗಳು, ಆಹಾರ ನಿಯಮಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಪಾಲಿಸಲು ನೆರವಾಗುತ್ತವೆ. ಅದರಲ್ಲೂ ದಿನನಿತ್ಯ ಎರಡು ಚಮಚ ಡಾಬರ್ ಚ್ಯವನ್‌ಪ್ರಾಶ್ ಸೇವನೆಯು ರಸಾಯನ ಚಿಕಿತ್ಸೆಯನ್ನು ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಲು ಅತ್ಯಂತ ಉತ್ತಮ ಮಾರ್ಗವಾಗಿದೆ.

ಈ ವೇಳೆ ಡಾ. ರುಚಿ ಅವರು ಮಾತನಾಡಿ, ಚವನ್‌ಪ್ರಾಶ್ ಆಯುರ್ವೇದ ಉತ್ಪನ್ನವಾಗಿದ್ದು, ದಶಕಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳಿಂದ ರಕ್ಷಣೆ ಹೊಂದಲು ಬಳಸಲಾಗುತ್ತಿದೆ ಎಂದರು.

ಸಂಸ್ಥೆಯ ಪ್ರಶಾಂತ್ ಅಗರವಾಲ್ ಅವರು ಮಾತನಾಡಿ, ಆಯುರ್ವೇದದ ಶ್ರೀಮಂತ ಪರಂಪರೆ ಮತ್ತು ಪ್ರಕೃತಿ ಗಾಢ ಜ್ಞಾನ ಹೊಂದಿರುವ ಡಾಬರ್ ಯಾವಾಗಲೂ ಸುರಕ್ಷಿತ, ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸಮಂತ್, ಗಾಂಧಿ ನಗರ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಡಾಬರ್ ಇಂಡಿಯಾದ ದಿನೇಶ್ ಕುಮಾರ್ ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment