Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ವಾಟ್ಸಾಪ್ ಟಾರ್ಗೆಟ್ ಮಾಡಿದ ಸೈಬರ್ ವಂಚಕರು : ಲಾಟರಿ, ಕೆವೈಸಿ, ಜಾಬ್ ಆಫರ್ ಬಗ್ಗೆ ಇರಲಿ ಎಚ್ಚರ..!

---Advertisement---

ಬೆಂಗಳೂರು: ಈಗಂತೂ ಸೈಬರ್ ವಂಚಕರು ತಮ್ಮ ಜಾಲವನ್ನು ಬೇರೆ ರೀತಿಯಲ್ಲಿಯೇ ವಿಸ್ತರಿಸಿಕೊಂಡಿದ್ದಾರೆ. ಜನ ಏನನ್ನ ಹೆಚ್ಚು ಬಳಕೆ ಮಾಡುತ್ತಾರೋ ಅದನ್ನೇ ಸೈಬರ್ ವಂಚಕರು ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ಟ್ರಾಫಿಕ್ ರೂಲ್ಸ್ , ಬ್ಯಾಂಕ್ ಅಪ್ಡೇಟ್, ಜಾಬ್ ಆಫರ್ ನೀಡುವುದು, ಡೆಲಿವರಿ ಬಂದಿದೆ ಎನ್ನುವುದು ಅಷ್ಟೆ ನಾನಿನ್ನ ಹಳೆ ಫ್ರೆಂಡ್ ಅಂತ ಹೇಳಿ ಮದುವೆ ಪತ್ರಿಕೆ ಕಳುಹಿಸಿಯೂ ಕೋಟಿ ಕೋಟಿ ವಂಚನೆ ಮಾಡಿದ್ದಾರೆ. ಈಗಂತೂ ವಾಟ್ಸಾಪ್ ಮೂಲಕ ಹೆಚ್ಚು ಸೈಬರ್ ವಂಚನೆಗಳು ನಡೆಯುತ್ತಿದ್ದು, ಅದೆಲ್ಲದರಿಂದ ಸ್ವಲ್ಪ ಜಾಗರೂಕರಾಗಿರಿ‌.

ಅದರಲ್ಲೂ ವಾಟ್ಸಾಪ್ ಬಳಕೆದಾರರು ಎಚ್ಚರದಿಂದ ಇರಬೇಕಾಗಿದೆ. ಕಳುಹಿಸುವ ಒಂದು ಲಿಂಕ್ ಓಪನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಂಗಮಾಯವಾಗಬಹುದು. ಹೀಗಾಗಿ ಬ್ಯಾಂಕ್ ಕೆವೈಸಿ ಅಪ್ಡೇಟ್, ಲಾಟರಿ ಹೊಡೆದಿದೆ ಅಥವಾ ಬಹುಮಾನ ಬಂದಿದೆ ಎಂಬೆಲ್ಲ ಆಶ್ವಾಸನೆಗಳನ್ನು ನಂಬುವುದಕ್ಕೆ ಹೋಗಬೇಡಿ. ಅದರಿಂದ ನಿಮಗೆ ತೊಂದರೆ ಎದುರಾಗಬಹುದು.

ಅದರಲ್ಲೂ ಅಪರಾಧಿಗಳು ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಯಾಮಾರಿಸುತ್ತಿದ್ದಾರೆ. ಒಳ್ಳೆಯ ಉದ್ಯೋಗ ನೀಡುತ್ತೇವೆಂದು ಲಿಂಕ್ ಕಳುಹಿಸುತ್ತಾರೆ. ಅದರಲ್ಲೂ ಆ ಲಿಂಕ್ ಅಫಿಷಿಯಲ್ ಪೇಜ್ ಗಳಂತೆಯೇ ಇರುವಂತೆ ಲಿಂಕ್ ಗಳನ್ನ ಕಳುಹಿಸುತ್ತಾರೆ. ಆದರೆ ಅದನ್ನ ಓಪನ್ ಮಾಡಿ, ವೈಯಕ್ತಿಕ ನಮೂದಿಸಿದರೆ ಮುಗೀತು ಸುಲಭವಾಗಿ ಬ್ಯಾಂಕ್ ಖಾತೆಗೆ ಪ್ರವೇಶ ಮಾಡುತ್ತಾರೆ.

ಇನ್ನು ಬ್ಯಾಂಕ್ ಖಾತೆದಾರರಿಗೆ ಬ್ಯಾಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಅನ್ನ ಓಪನ್ ಮಾಡಿ, ಕೆವೈಸಿಗೆ ಬೇಕಾದ ಮಾಹಿತಿ ಕೊಟ್ಟಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಹಣ ಖಾಲಿಯಾಗದೆ ಇರುವುದಿಲ್ಲ. ಹಾಗೇ ನೀವೂ ಏನನ್ನು ಆರ್ಡರ್ ಮಾಡದೆ ಇದ್ದರು ನಿಮ್ಮ ಹೆಸರಲ್ಲಿ ಬರುವ ಡೆಲಿವರಿ ಬಗ್ಗೆಯೂ ಎಚ್ಚರದಿಂದ ಇರಿ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...