ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು ಎಂದಿದೆ. ಜೈಲಿನ ಒಳ ಸಂದರ್ಶನಕ್ಕೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅದಕ್ಕೆ ಕೋರ್ಟ್ ಒಪ್ಪಿಗೆ ನೀಡಿದೆ. ಆದರೆ ಇಲ್ಲಿ ಒಂದು ಷರತ್ತನ್ನು ಇಡಲಾಗಿದೆ. ಈ ಸಂಬಂಧ ಜೈಲಿನ ಅಧೀಕ್ಷಕರಿಗೆ ಅಧಿಕಾರವನ್ನ ನೀಡಿದೆ. ಜೈಲು ನಿಯಮದ ಪ್ರಕಾರ ಒಳ ಸಂದರ್ಶನ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ಅಧೀಕ್ಷಕರು ಒಪ್ಪದೆ ಇದ್ದರೆ ಒಳ ಸಂದರ್ಶನಕ್ಕೆ ಅವಕಾಶ ಇರೋದಿಲ್ಲ ಎಂಬುದನ್ನು ಸೂಚನೆ ನೀಡಿದೆ.
ಈ ಸಂಬಂಧ 57ನೇ ಸೆಷನ್ ಕೋರ್ಟ್ ನಿಂದ ಆದೇಶ ಬಂದಿದೆ. ದರ್ಶನ್ ಬೇಡಿಕೆಗೆ ಒಪ್ಪಿಗೆ ಏನೋ ಕೊಟ್ಟಿದ್ದು, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಡಿದೆ. ಅಧೀಕ್ಷಕರ ಅನುಮತಿ ಮೇರೆಗೆ ದರ್ಶನ್ ಬೇಡಿಕೆಯ ಈಡೇರಿಕೆ ನಿಂತಿದೆ. ಈ ಒಳ ಸಂದರ್ಶನ ಹೇಗಿರುತ್ತೆ ಅಂದ್ರೆ ಕಂಪ್ಲೀಟ್ ಪ್ರೈವೆಸಿ ಇರುತ್ತೆ. ನಾರ್ಮಲ್ ಆಗಿ ದರ್ಶನ್ ಅವರನ್ನು ಭೇಟಿ ಮಾಡಲು ಬಂದಾಗ ಒಬ್ಬರು ಪೊಲೀಸ್ ಅಧಿಕಾರಿ ಇದ್ದೆ ಇರ್ತಾರೆ. ಅವರ ಮುಂದೆಯೇ ಮಾತುಕತೆ ನಡೆಯುತ್ತದೆ. ಆದರೆ ಈ ಒಳ ಸಂದರ್ಶನದಲ್ಲಿ ಯಾವ ರೀತಿಯಾಗಿರುತ್ತೆ ಅಂದ್ರೆ ಒಂದು ಕೊಠಡಿಯಲ್ಲಿ ದರ್ಶನ್ ಅವರ ಕುಟುಂಬಸ್ಥರು, ವಕೀಲರ ಜೊತೆಗೆ ಕೂತು ಮಾತನಾಡಬಹುದಾಗಿದೆ. ಈಗಾಗಲೇ ಟ್ರಯಲ್ ನಡೆಯುತ್ತಿರುವ ಕಾರಣ ದರ್ಶನ್ ಅವರಿಗೂ ಒಂದಷ್ಟು ಪ್ರಶ್ನೆಗಳಿರುತ್ತವೆ. ಇದೆಲ್ಲವನ್ನು ಕೇಳುವುದಕ್ಕೂ ದರ್ಶನ್ ಅವರಿಗೆ ಅವಕಾಶ ಬೇಕಾಗಿದೆ. ಹೀಗಾಗಿ ಒಳ ಸಂದರ್ಶನಕ್ಕೆ ಅರ್ಜಿಯನ್ನ ಹಾಕಲಾಗಿತ್ತು. ಅದಕ್ಕೆ ಕೋರ್ಟ್ ಏನೋ ಒಪ್ಪಿಗೆ ನೀಡಿದೆ, ಆದರೆ ಅಧೀಕ್ಷಕರ ಅನುಮತಿ ಮೇರೆಗೆ ಈ ಸಾಧ್ಯತೆ ಇರಲಿದೆ.








