Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅರ್ಜುನ್ ಗಾಗಿ ಮುಂದುವರೆದ ಶೋಧ : ನಮ್ಮಪ್ಪನ ಮೂಳೆಯನ್ನಾದರೂ ಕೊಡಿ ಎಂದ ಇನ್ನೊಬ್ಬ ಯುವತಿ..!

---Advertisement---

ಶಿರೂರು ಗುಡ್ಡ ಕುಸಿತದಿಂದಾಗಿ ಹಲವು ಸಾವು ನೋವುಗಳಾಗಿವೆ. ಇನ್ನು ನಾಪತ್ತೆಯಾದವರ ಹುಡುಕಾಟವೂ ನಡೆಯುತ್ತಲೇ ಇದೆ. ಅದರಲ್ಲೂ ಕೇರಳ ಮೂಲದ ಅರ್ಜುನ್ ಲಾರಿ ಸಮೇತ ನಾಪತ್ತೆಯಾಗಿದ್ದು ಹುಡುಕಾಡುತ್ತಿದ್ದಾರೆ. ಇದೀಗ ಅರ್ಜುನ್ ಹುಡುಕಾಟದ ಬೆನ್ನಲ್ಲೇ ಇನ್ನಿಬ್ಬರು ನಾಪತ್ರೆಯಾದವರ ಕುಟುಂಬಸ್ಥರು ಒತ್ತಡ ಹಾಕುತ್ತಿದ್ದಾರೆ. ನಮ್ಮವರ ಮೂಳೆಯನ್ನಾದರೂ ಹುಡುಕಿಕೊಡಿ ಎನ್ನುತ್ತಿದ್ದಾರೆ.

ಇದೇ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಹಾಗೂ ಲೋಕೇಶ್ ಎಂಬುವವರು ಕೂಡ ನಾಪತ್ತೆಯಾಗಿದ್ದರು. ಜುಲೈ 16ರಂದು ನಡೆದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಎಂಬುವವರು ಕಾಣೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವು ಕೂಡ ಸಿಕ್ಕಿಲ್ಲ. ಇದೋಗ ಅವರ ಮಗಳು ಪಲ್ಲವಿ ತಂದೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ತಂದೆ ಸಿಗದ ಬಗ್ಗೆ ಕಣ್ಣೀರಾಕಿರುವ ಪಲ್ಲವಿ, ನಮ್ಮ ತಂದೆ ಕಾಣೆಯಾಗಿ 12 ದಿನ ಆಯ್ತು. ಏನು ಸುದ್ದಿ ಇಲ್ಲ. ಅವರನ್ನು ಹುಡುಕಿಕೊಡಿ. ಅವರನ್ನು ನಾವೂ ನೋಡಬೇಕು. ಕಾರ್ಯಾಚರಣೆ ಬಗ್ಗೆ ಏನು ಗೊತ್ತಾಗುತ್ತಿಲ್ಲ. ಬರೀ ಅರ್ಜುನ್, ಲಾರಿ ಅಂತಷ್ಟೇ ಹೇಳುತ್ತಿದ್ದಾರೆ. ನಮ್ಮ ಅಪ್ಪನ ಬಗ್ಗೆ ಏನು ಮಾತನಾಡುತ್ತಿಲ್ಲ. ಸರ್ಕಾರದವರು, ಜನಪ್ರತಿನಿಧಿಗಳು ಹುಡುಕಿಕೊಡುತ್ತೇವೆ ಎನ್ನುತ್ತಿದ್ದಾರೆ. ಅಮ್ಮ ಸರಿಯಾಗಿ ಊಟ ಮಾಡುತ್ತಿಲ್ಲ. ಮಾವ, ಅತ್ತೆ ಅವರ ನೆನಪಿನಲ್ಲಿಯೇ ಇದ್ದಾರೆ. ಅವರ ಮೂಳೆ ಸಿಕ್ಕ ಲರು ಸಾಕು ಹುಡುಕಿಕೊಡಿ ಎಂದು ಪಲ್ಲವಿ ಮನವಿ ಮಾಡಿದ್ದಾರೆ.

ಲೋಕೇಶ್ ಎಂಬಾತ ಕೂಡ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದಾನೆ. ಚಾಲಕನ ಜೆಲಸ ಮಾಡುತ್ತಿದ್ದ ಲೋಕೇಶ್ ಗುಡ್ಡ ಕುಸಿತಕ್ಕೂ ಮೊದಲು ಹೊಟೇಲ್ ಒಂದರಲ್ಲಿ ಕಾಣಿಸಿದ್ದ ಎನ್ನಲಾಗಿದೆ. ಹೀಗಾಗಿ ಲೋಕೇಶ್ ಅವರಿಗೂ ಹುಡುಕಾಟ ನಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...