Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಹಕರಿಗೆ ಬೆಲೆ ಏರಿಕೆ ಬರೆ; ಗಗನಕ್ಕೇರಿದ ತರಕಾರಿ ದರ!

---Advertisement---

ಸುದ್ದಿಒನ್,ಬೆಂಗಳೂರು,ಮೇ.11: ರಾಜ್ಯದ ಜನತೆಗೆ ಒಂದೆಡೆ ಅಡುಗೆ ಅನಿಲದ (ಸಿಲಿಂಡರ್) ಕೊರತೆ ಕಾಡುತ್ತಿದ್ದರೆ, ಇನ್ನೊಂದೆಡೆ ದಿನೇ ದಿನೇ ಏರುತ್ತಿರುವ ತರಕಾರಿ ಬೆಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಹದಿನೈದು ದಿನಗಳಿಗೆ ಹೋಲಿಸಿದರೆ ಬಹುತೇಕ ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದ್ದು, ಜನಸಾಮಾನ್ಯರ ಅಡುಗೆಮನೆ ಬಜೆಟ್ ತಲೆಕೆಳಗಾಗಿದೆ.

ತೀವ್ರ ಬಿಸಿಲಿನ ತಾಪದಿಂದಾಗಿ ತರಕಾರಿ ಗಿಡಗಳ ಹೂವು ಉದುರುತ್ತಿದ್ದರೆ, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿ ಇಳುವರಿ ಕುಂಠಿತಗೊಂಡಿದೆ.ಸದ್ಯ ಮದುವೆ ಸೀಸನ್, ಊರ ಹಬ್ಬಗಳು ಹಾಗೂ ಜಾತ್ರೆ-ರಥೋತ್ಸವಗಳ ಸಾಲು ಇರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.  ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗದಿರುವುದು ದರ ಏರಿಕೆಗೆ ಮುಖ್ಯ ಕಾರಣವಾಗಿದೆ.

ತರಕಾರಿ ಬೆಲೆಗಳ ಇಂದಿನ ಸ್ಥಿತಿ (ಪ್ರತಿ ಕೆ.ಜಿ.ಗೆ):

ತರಕಾರಿ ಹೆಸರು 10 ದಿನದ ಹಿಂದೆ (₹) ಇಂದಿನ ದರ (₹)
ಬೀನ್ಸ್ 80 200
ಬಟಾಣಿ 120 360
ಡಬಲ್ ಬೀನ್ಸ್ 120 260
ಕ್ಯಾರೆಟ್ 30 60
ಟೊಮೆಟೋ 30 60
ಸೌತೆಕಾಯಿ 30 60
ಹಸಿ ಮೆಣಸಿನಕಾಯಿ 70 95
ಬೀಟ್ ರೂಟ್ 45 70
ಕ್ಯಾಪ್ಸಿಕಂ 65 90
ಹೂಕೋಸು 40 65
ಎಲೆಕೋಸು 30 50

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now