ದಾವಣಗೆರೆ, ಆಗಸ್ಟ್ 12 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದ ಆರಂಭಗೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ರ ಮನೆ ಮನೆ ಭೇಟಿ ಪ್ರಗತಿಯಲ್ಲಿದ್ದು, ಜಿಲ್ಲೆಯಾದ್ಯಂತ ಬಿಎಲ್‌ಒ ರವರಿಂದ ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 12,97,800 ನಮೂನೆಗಳ ಗಣಕೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಪ್ರಗತಿ ಹಾಗೂ ಮಾಹಿತಿ ವಿವರ ಹೀಗಿದೆ:
103- ಜಗಳೂರು ಕ್ಷೇತ್ರ 2,00,836 ಹಂಚಿಕೆಯಾದ ನಮೂನೆಗಳಲ್ಲಿ 1,81,025 ಗಣಕೀಕರಣಗೊಂಡಿದ್ದು; 11,588 ಶಾಶ್ವತ ವಲಸೆ, 3,712 ಮರಣ, 3,389 ದ್ವಿಪ್ರತಿ, 55 ಇತರೆ ಹಾಗೂ 1,067 ಗುರುತಿಸಲಾಗದ ಸ್ಥಳಾಂತರ ಮತ್ತು 19,811 ಸಂಗ್ರಹವಾಗದ/ಗೈರು ನಮೂನೆಗಳನ್ನು ನಮೂದಿಸಲಾಗಿದೆ.
105-ಹರಿಹರ ಕ್ಷೇತ್ರ: 2,11,023 ನಮೂನೆಗಳಲ್ಲಿ 1,90,055 ಗಣಕೀಕರಣಗೊಂಡಿದ್ದು; 7,307 ಶಾಶ್ವತ ವಲಸೆ, 4,782 ಮರಣ, 5,302 ದ್ವಿಪ್ರತಿ, 77 ಇತರೆ ಹಾಗೂ 20,968 ಗುರುತಿಸಲಾಗದ ಸ್ಥಳಾಂತರ ಮತ್ತು 3,500 ಸಂಗ್ರಹವಾಗದ/ಗೈರು ಎಂದು ದಾಖಲಾಗಿದೆ.
106-ದಾವಣಗೆರೆ ಉತ್ತರ ಕ್ಷೇತ್ರ: 2,58,718 ನಮೂನೆಗಳಲ್ಲಿ 1,98,644 ಗಣಕೀಕರಣಗೊಂಡಿದ್ದು; 31,441 ಶಾಶ್ವತ ವಲಸೆ, 7,544 ಮರಣ, 4,822 ದ್ವಿಪ್ರತಿ, 653 ಇತರೆ ಹಾಗೂ 60,075 ಗುರುತಿಸಲಾಗದ ಸ್ಥಳಾಂತರ ಮತ್ತು 15,615 ಸಂಗ್ರಹವಾಗದ/ಗೈರು ಪ್ರಕರಣಗಳು ಕಂಡುಬಂದಿವೆ.
107-ದಾವಣಗೆರೆ ದಕ್ಷಿಣ ಕ್ಷೇತ್ರ: 2,27,996 ನಮೂನೆಗಳಲ್ಲಿ 1,74,347 ಗಣಕೀಕರಣಗೊಂಡಿದ್ದು; 29,229 ಶಾಶ್ವತ ವಲಸೆ, 6,626 ಮರಣ, 7,338 ದ್ವಿಪ್ರತಿ, 462 ಇತರೆ ಹಾಗೂ 9,994 ಗುರುತಿಸಲಾಗದ ಸ್ಥಳಾಂತರ ಮತ್ತು 53,649 ಸಂಗ್ರಹವಾಗದ/ಗೈರು ದಾಖಲಾಗಿವೆ.
108-ಮಾಯಕೊಂಡ ಕ್ಷೇತ್ರ : 1,97,048 ನಮೂನೆಗಳಲ್ಲಿ 1,84,534 ಗಣಕೀಕರಣಗೊಂಡಿದ್ದು; 6,023 ಶಾಶ್ವತ ವಲಸೆ, 4,180 ಮರಣ, 2,013 ದ್ವಿಪ್ರತಿ, 38 ಇತರೆ ಹಾಗೂ 12,514 ಗುರುತಿಸಲಾಗದ ಸ್ಥಳಾಂತರ ಮತ್ತು 260 ಸಂಗ್ರಹವಾಗದ/ಗೈರು ಕಂಡುಬಂದಿವೆ.
109-ಚನ್ನಗಿರಿ ಕ್ಷೇತ್ರ : 2,03,628 ನಮೂನೆಗಳಲ್ಲಿ 1,85,635 ಗಣಕೀಕರಣಗೊಂಡಿದ್ದು; 10,198 ಶಾಶ್ವತ ವಲಸೆ, 3,647 ಮರಣ, 3,485 ದ್ವಿಪ್ರತಿ, 40 ಇತರೆ ಹಾಗೂ 17,993 ಗುರುತಿಸಲಾಗದ ಸ್ಥಳಾಂತರ ಮತ್ತು 623 ಸಂಗ್ರಹವಾಗದ/ಗೈರು ನಮೂದಾಗಿವೆ.
110-ಹೊನ್ನಾಳಿ ಕ್ಷೇತ್ರ : 2,00,033 ನಮೂನೆಗಳಲ್ಲಿ 1,83,560 ಗಣಕೀಕರಣಗೊಂಡಿದ್ದು; 9,466 ಶಾಶ್ವತ ವಲಸೆ, 4,133 ಮರಣ, 1,867 ದ್ವಿಪ್ರತಿ, 59 ಇತರೆ ಹಾಗೂ 16,473 ಗುರುತಿಸಲಾಗದ ಸ್ಥಳಾಂತರ ಮತ್ತು 948 ಸಂಗ್ರಹವಾಗದ/ಗೈರು ದಾಖಲಾಗಿವೆ.
ಇಡೀ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,05,252 ಶಾಶ್ವತ ವಲಸೆ, 34,624 ಮರಣ ಪ್ರಕರಣಗಳು, 28,216 ದ್ವಿಪ್ರತಿ, 1,384 ಇತರೆ, ಹಾಗೂ 32,007 ಗುರುತಿಸಲಾಗದ ಸ್ಥಳಾಂತರ/ವಲಸೆ ಮತ್ತು 2,01,483 ಸಂಗ್ರಹವಾಗದ/ಗೈರು ಮತದಾರರ ಮಾಹಿತಿಯನ್ನು ಕ್ರೋಡೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.











