ಪಠ್ಯಪುಸ್ತಕ ಸಂಪೂರ್ಣ ಪರಿಷ್ಕರಣೆ ಮಾಡಿ ಇನ್ನೊಂದು ವಾರದಲ್ಲಿ ನೀಡಲಾಗುವುದು : ಆರ್ ಅಶೋಕ್

suddionenews
2 Min Read

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸುತ್ತಿದ್ದು, ಭಾರತ ನಮ್ಮ ಹೆಮ್ಮೆ ಎಂದು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ, ಇದ್ರಲ್ಲಿ ತಪ್ಪೇನಿದೆ? ಎಂದು ಸಚಿವ ಆರ್ ಅಶೋಕ್ ಕೇಳಿದ್ದಾರೆ.

ಕೆ ಎಸ್ ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನ ಸೇರಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ. ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ ಸೇರ್ಪಡೆ. ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನ ಮರು ಮರು ಸೇರ್ಪಡೆ. ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಮಾಡಿದ್ದೇವೆ.

ಎಸ್ ಎಲ್ ಭೈರಪ್ಪ ಬರೆದ ಯಾವುದೇ ಪಠ್ಯ ಪುಸ್ತಕ ಇರಲಿಲ್ಲ. ೯ನೇ ತರಗತಿಯ ಪಠ್ಯದಲ್ಲಿ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹವನ್ನ ಸೇರಿಸಿದ್ದೇವೆ. ಸನಾತನ ಧರ್ಮದ ಪಾಠವನ್ನ ೮ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಮಂಜೇಶ್ವರ್ ಗೋವಿಂದ ಪೈ ಬರಹ ಮರು ಸೇರ್ಪಡೆ ಮಾಡಿದ್ದೇವೆ. ಪಂಜೆ ಮಂಗೇಶರಾಯರ ಸೀಗಡಿ ಯಾಕೆ ಒಣಗಲಿಲ್ಲ ಪಠ್ಯ ಸೇರ್ಪಡೆಯಾಗಿದೆ.

ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ ಬಗ್ಗೆ ವಿಷಯ ಹೆಚ್ಚಿತ್ತು. ನಮ್ಮ‌ ನೆಲದ ರಾಜರ ಪರಿಚಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ. ಕ್ರೈಸ್ತ,ಇಸ್ಲಾಂ ಧರ್ಮವನ್ನ ಪಾಶ್ಚಾತ್ಯ ರಿಲಿಜಿನ್ ಗಳನ್ನ ಬದಲಾಯಿಸಿ ಯಹೂದಿ, ಪಾರ್ಸಿ,ಧರ್ಮಗಳ ವಿಷಯಗಳನ್ನ ಸೇರಿಸಿದ್ದೇವೆ.

ಕುವೆಂಪು ಪಠ್ಯವನ್ನ ೮ ಇದ್ದಿದ್ದು ೭ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ನಮ್ಮ ಸರ್ಕಾರ ೧೦ ಅಧ್ಯಾಯಗಳನ್ನ ಸೇರಿಸಿದ್ದೇವೆ. ನಾವೆಲ್ಲಿ ತಪ್ಪು ಮಾಡಿದ್ದೇವೆ ಹೇಳಿ?. ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿರುವ ಪ್ರಮುಖ ಅಂಶಗಳು. ರಾಷ್ಟ್ರಕವಿ ಕುವೆಂಪುರವರ ಅನಲೆ- ಶ್ರೀರಾಮಾಯಣ ದರ್ಶನಂ ಕುರಿತ ಗದ್ಯ, ಅಜ್ಜಯ್ಯನ ಅಭ್ಯಂಜನ ಇರಲಿಲ್ಲ. ಬೆಂಗಳೂರು ಪರಿಚಯಿಸುವ ಪಾಠದಲ್ಲಿ ನಾಡಪ್ರಭು ಕೆಂಪೇಗೌಡ ಉಲ್ಲೇಖವಿರಲಿಲ್ಲ. ರಾಷ್ಟ್ರಧ್ವಜ ಕುರಿತು ಏರುತಿಹುದು ಹಾರುತಿಹುದು ನೋಡು ನಮ್ಮ ಭಾವುಟ ಪದ್ಯ. ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಗೀತೆ ತೆಗದಿದ್ದರು. ಭಾರತರ ಮಹಾರಾಜರ ಕೊಡುಗೆಗಳ ಕಡೆಗಣನೆ. ಟಿಪ್ಪುವಿನ ಅತೀಯಾದ ವೈಭವೀಕರಣ ಮಾಡಲಾಗಿದೆ.

ಕಾಂಗ್ರೆಸ್ ಅವಧಿಯಲ್ಲಿ ಪಠ್ಯ ಪುಸ್ತಕಗಳಲ್ಲಿ ೧೫೦ ತಪ್ಪು ಆಗಿತ್ತು. ನಮ್ಮ ಕಾಲದಲ್ಲಿ ಏಳೆಂಟು ತಪ್ಪು ಆಗಿದೆ. ಅದನ್ನ ಪರಿಷ್ಕರಣೆ ಮಾಡಿ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಟ್ಟಿದ್ದೇವೆ. ಪಠ್ಯಪುಸ್ತಕ ಸಂಪೂರ್ಣ ಪರಿಷ್ಕರಣೆ ಮಾಡಿ ಇನ್ನೊಂದು ವಾರದಲ್ಲಿ ಮಕ್ಕಳಿಗೆ ನೀಡಲಾಗುವುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *