ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ತಮಾಷೆ ಮಾಡಿಕೊಂಡು, ನಗಿಸುತ್ತಾ ಇರುವುದು ಗಿಲ್ಲಿ. ಎಂಥಾ ಸೀರಿಯಸ್ ಸನ್ನಿವೇಶ ಇದ್ರು, ಅಲ್ಲೊಂದು ನಗು ತರಿಸುವ ಗುಣ ಗಿಲ್ಲಿಗಿದೆ. ಆದರೆ ಎಷ್ಟೋ ಸಲ ಇದೆ ತಮಾಷೆ ತೊಂದರೆಗು ಸಿಲುಕಿಸಿದೆ. ಆದರೂ ಗಿಲ್ಲಿ ಬದಲಾಗುವುದಿಲ್ಲ. ಇದೀಗ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಮಾಡಿದ ಅವಾಂತರಕ್ಕೆ ಮಹಿಳಾ ಆಯೋಗವು ಪೊಲೀಸ್ ಕಮಿಷನರ್ ಕಚೇರಿಗೆ ಪತ್ರ ಬರೆದಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹೆಣ್ಣು ಮಕ್ಕಳಿಗೆ ತೊಂದರೆ ಕೊಡ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಿದ್ದಾರೆ.
ಕಲಾವಿದೆ ಕುಶಲಾ ಎಂಬುವವರು ಗಿಲ್ಲಿ ವಿರುದ್ಧ ಆರೋಪ ಮಾಡಿದ್ದು, ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಮಹಿಳಾ ಆಯೋಗವು, ಕಮಿಷನರ್ ಕಚೇರಿಗೆ ಪತ್ರ ಬರೆದಿದೆ. ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪತ್ರ ಬರದಿದೆ.
ಕಳೆದ ವಾರದ ಎಪಿಸೋಡ್ ನಲ್ಲಿ ಗಿಲ್ಲಿ ನಟ ಮತ್ತು ರಿಷಾ ನಡುವೆ ಜೋರು ಜಗಳವೇ ನಡೆದಿತ್ತು. ರಿಷಾ ಸ್ನಾನಕ್ಕೆ ಹೋದಾಗ, ಅವರ ಬಟ್ಟೆಯನ್ನು ವಾಶ್ ರೂಮ್ ಬಳಿ ತಂದು ಹಾಕಿದ್ದರು ಗಿಲ್ಲಿ. ಇದಕ್ಕೆ ಸಿಟ್ಟಾದ ರಿಷಾ ಗೌಡ ಗಿಲ್ಲಿ ಮೇಲೆ ಕೈ ಮಾಡಿದ್ದರು. ನ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ರಿಷಾರಿಗೆ ಕ್ಷಮೆ ನೀಡಿ, ಮನೆ ಮಂದಿ ಉಳಿಸಿಕೊಂಡಿದ್ದಾರೆ. ಆದರೆ ಈಗ ಅದೇ ವಿಚಾರಕ್ಕೆ ಕುಶಾಲ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಗಿಲ್ಲಿಯಿಂದ ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾಗ್ತಾ ಇದೆ , ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











