Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಕ್ಷಿತಾ ವಿಚಾರಕ್ಕೆ ಸುದೀಪ್ ಮೇಲೆಯೇ ದೂರು : ಯಾರು ಕೊಟ್ಟದ್ದು..? ಏನು ವಿಚಾರ..?

---Advertisement---

ಬೆಂಗಳೂರು: ಬಿಗ್ ಬಾಸ್ ಶುರುವಾದ ಮೇಲೆ ಅಲ್ಲೊಂದು ಇಲ್ಲೊಂದು ದೂರು ದಾಖಲಾಗ್ತಾನೆ ಇರ್ತಾವೆ. ಆದರೆ ಈ ಸೀಸನ್ ನಲ್ಲಿ ಜಾಸ್ತಿ ದಾಖಲಾಗಿದಾವೆ ಅನ್ಸುತ್ತೆ. ಅಶ್ವಿನಿ ಮೇಲಾಯ್ತು, ಗಿಲ್ಲಿ ಮೇಲಾಯ್ತು, ರಿಷಾ ಮೇಲಾಯ್ತು, ರಕ್ಷಿತಾ ಮೇಲಾಯ್ತು. ಈಗ ಸುದೀಪ್ ಅವರ ಮೇಲೆ ದೂರು ನೀಡಿರೋದು ಆಶ್ಚರ್ಯವಾಗಿದೆ. ಅದು ರಕ್ಷಿತಾ ವಿಚಾರಕ್ಕೆ.

ಬಿಗ್ ಬಾಸ್ ಅಂದ್ರೆ ಸುದೀಪ್..ಸುದೀಪ್ ಅಂದ್ರೆ ಬಿಗ್ ಬಾಸ್. ಅಂದ್ರೆ ಸುದೀಪ್ ಬಿಟ್ಟು ಬೇರೆ ಯಾರೇ ಆ ಶೋ ನಡೆಸಿಕೊಟ್ಟರು ಬ್ಯೂಟಿಯಂತೆ ಕಾಣಿಸೋದಿಲ್ಲ. ವಾರವಿಡೀ ಸ್ಪರ್ಧಿಗಳ ಅವತಾರವನ್ನೆಲ್ಲ ನೋಡುವ ಬಿಗ್ ಬಾಸ್ ಕ್ಯಾಮೆರಾಗಳು, ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅದಕ್ಕೆಲ್ಲ ಉತ್ತರ ಕೊಡೋದೆನೆ ಚೆಂದ ಅನ್ಸುತ್ತೆ. ಆದರೆ ವೀಕೆಂಡ್ ನಲ್ಲಿ ಉತ್ತರ ಕೊಡುವಾಗಿನ ಸಂದರ್ಭದಲ್ಲಿ ಕಿಚ್ಚ ಆಡಿದ ಮಾತುಗಳನ್ನೇ ಇಟ್ಟುಕೊಂಡು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಸಂಧ್ಯಾ ಎಂಬುವವರಿಂದ ಈ ದೂರು ದಾಖಲಾಗಿದೆ. ಇವರು ಸಾಮಾಜಿಕ ಹೋರಾಟಗಾರ್ತಿ ಕೂಡ. ಪಿತ್ತ ನೆತ್ತಿಗೆ ಏರುತ್ತದೆ ಎಂಬ ಸಾಲನ್ನ ಇಟ್ಟುಕೊಂಡು ದೂರು ನೀಡಲಾಗಿದೆ. ಡಿವೈಎಸ್ಪಿಗೆ ದೂರು ಸಲ್ಲಿಕೆ ಮಾಡಿರುವ ಸಂಧ್ಯಾ, ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡುವುದು ಎಷ್ಟು ಸರಿ..? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ..? ಅಶ್ವಿನಿ ಗೌಡ ಅವರು ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ‌. ಹಾಗಾಗಿ ನಾನು ಈ ಬಗ್ಗೆ ದೂರು ನಿಡೀದ್ದೇ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now