Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಯೂನಿಯನ್ ಪಾರ್ಕಿಗೆ ಕಾಂ. ಜಿ.ಚಂದ್ರಣ್ಣನವರ ಹೆಸರಿಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.26 :  ಕಾರ್ಮಿಕ ಮುಖಂಡರೆಂದೆ ಗುರುತಿಸಿಕೊಂಡಿದ್ದ ದಿವಂಗತ ಕಾಂ. ಜಿ.ಚಂದ್ರಣ್ಣನವರ ಹೆಸರನ್ನು ಯೂನಿಯನ್ ಪಾರ್ಕಿಗೆ ನಾಮಕರಣ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ನಗರಸಭೆಗೆ ಆಗಮಿಸಿದ ಕಾರ್ಮಿಕ ಮುಖಂಡರುಗಳು ಹುಟ್ಟು ಹೋರಾಟಗಾರರಾಗಿದ್ದ ಕಾಂ.ಜಿ.ಚಂದ್ರಣ್ಣನವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನೇಕ ಗುರುತರ ಕೆಲಸಗಳನ್ನು ಮಾಡಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯಬೇಕಾಗಿರುವುದರಿಂದ ಯೂನಿಯನ್ ಪಾರ್ಕಿಗೆ ಜಿ.ಚಂದ್ರಣ್ಣನವರ ಹೆಸರಿಡಬೇಕು. ನಗರದ ಯಾವ ರಸ್ತೆಗೂ ಕಾರ್ಮಿಕ ನಾಯಕರ ಹೆಸರಿಟ್ಟಿಲ್ಲ ಎಂದು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರು.

1985 ರಿಂದ 87 ರವರೆಗೆ ಎರಡು ವರ್ಷಗಳ ಕಾಲ ಚಿತ್ರದುರ್ಗ ನಗರಸಭೆ ಅಧ್ಯಕ್ಷರಾಗಿದ್ದ ಜಿ.ಚಂದ್ರಣ್ಣನವರು ತಮ್ಮ ಅಧಿಕಾರವಧಿಯಲ್ಲಿ ಐದು ಸಾವಿರ ಗಿಡಗಳನ್ನು ನಗರದಲ್ಲಿ ನೆಡೆಸಿ ಹಸಿರು ಪರಿಸರಕ್ಕೆ ಒತ್ತು ಕೊಟ್ಟು ಎರಡನೆ ಭೀಮಪ್ಪನಾಯಕ ಎಂದೆ ಹೆಸರು ಪಡೆದಿದ್ದರು. ಆದ್ದರಿಂದ ಯೂನಿಯನ್ ಪಾರ್ಕಿಗೆ ದಿವಂಗತ ಕಾಂ.ಜಿ.ಚಂದ್ರಣ್ಣವರ ಹೆಸರಿಡುವುದು ಸೂಕ್ತ ಎಂದು ಪೌರಾಯುಕ್ತರಲ್ಲಿ ಸಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ವಿನಂತಿಸಿದರು.

ಕಾಂ.ಸಿ.ವೈ.ಶಿವರುದ್ರಪ್ಪ, ಕಾಂ. ಬಿ.ಬಸವರಾಜಪ್ಪ, ಕಾಂ.ಟಿ.ಆರ್.ಉಮಾಪತಿ, ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಕಾಂ.ಸತ್ಯಕೀರ್ತಿ, ಕಾಂ.ಹನುಮಂತಪ್ಪ, ಕಾಂ.ಚಂದ್ರಪ್ಪ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ತಿಪ್ಪೇಸ್ವಾಮಿ, ಕಾಂ.ರವಿಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...