Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿ.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಡೆಸ್ಟಿನಿ-2023 ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ : ಕಣ್ಮನ ಸೆಳೆದ ಡಿಜೆ ನೈಟ್

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.24 : ಚಳ್ಳೆಕೆರೆ ಟೋಲ್‍ಗೇಟ್‍ನಲ್ಲಿರುವ ಡಿ.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ನಲವತ್ತು ವರ್ಷಗಳ ಶೈಕ್ಷಣಿಕ ಸಾರ್ಥಕತೆಗಾಗಿ ಡಿ.21 ರಿಂದ 24 ರವರೆಗೆ ನಾಲ್ಕು ದಿನಗಳ ಕಾಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಡೆಸ್ಟಿನಿ-2023 ವರ್ಣರಂಜಿತ ಕಾರ್ಯಕ್ರಮ ಭಾನುವಾರ ತೆರೆಕಂಡಿತು.

ಹಾಸ್ಯ ಚಟಾಕಿಯಿಂದಲೆ ನಾಡಿನಾದ್ಯಂತ ಎಲ್ಲರ ಮನಗೆದ್ದಿರುವ ಸುಧಾ ಬರಗೂರು, ಪ್ರಹ್ಲಾದ್‍ಜೋಶಿ, ಮಿಮಿಕ್ರಿ ಗೋಪಿ, ರಾಘವೇಂದ್ರ ಆಚಾರ್ಯ ಇವರುಗಳು ಮೊದಲ ದಿನ ಹಾಸ್ಯದ ರಸದೌತಣ ನೀಡಿದರು.

ಎರಡನೆ ದಿನವಾದ ಶುಕ್ರವಾರ ಮ್ಯೂಸಿಕಲ್ ಡೈರೆಕ್ಟರ್ ಅರ್ಜುನ್‍ಜನ್ಯರವರ ಹಾಡಿಗೆ ನೆರೆದಿದ್ದ ಜನಸ್ತೋಮವೇ ನಿಬ್ಬೆರಗಾಗಿ ಕಾರ್ಯಕ್ರಮವನ್ನು ಸವಿಯಿತು.
ಮ್ಯೂಸಿಕಲ್ ಕನ್ಸ್‍ರ್ಟ್ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಕಾರ್ಯಕ್ರಮ ಅಮೋಘವಾಗಿತ್ತು.

ಭಾನುವಾರದ ಡಿಜೆ ನೈಟ್ ಕೂಡ ಮನಮೋಹಕವಾಗಿತ್ತು.
ಡೆಸ್ಟಿನಿ ಕಾರ್ಯಕ್ರಮಕ್ಕಾಗಿ ಶಿಕ್ಷಣ ಸಂಸ್ಥೆಯ ಆವರಣವನ್ನು ಕಂಗೊಳಿಸುವಂತೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಾಲ್ಕು ದಿನದ ಕಾರ್ಯಕ್ರಮ ವೀಕ್ಷಣೆಗೆ ಬಂದವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಶ್ರೀಮತಿ ಎಸ್.ಚಂದ್ರಕಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವ ಉತ್ಸಾಹಿ ಎಂ.ಸಿ.ರಘುಚಂದನ್ ಇವರುಗಳು ನಾಲ್ಕು ದಿನಗಳ ಕಾಲ ಕಾರ್ಯಕ್ರಮದ ಹೊಣೆಹೊತ್ತು ಎಲ್ಲಿಯೂ ಲೋಪವಾಗದಂತೆ ನಿಭಾಯಿಸಿದರು.

ಡೆಸ್ಟಿನಿ-2023 ಕಾರ್ಯಕ್ರಮದ ಯಶಸ್ಸಿನ ಹಿಂದೆ ಡಿ.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಇಡಿ ಸಿಬ್ಬಂದಿಯ ಸಹಕಾರವೂ ಅಡಗಿತ್ತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment