ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ದೇವರಿಗೆ ಅರ್ಪಿಸುವ ಹೂವುಗಳಿಗೆ ವಿಶೇಷ ಪವಿತ್ರ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ದೇವರಿಗೆ ಸಮರ್ಪಿಸಿದ ಹೂವುಗಳು ದೈವಿಕ ಸ್ಪರ್ಶ ಪಡೆದ ನಿರ್ಮಾಲ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೂಜೆ ಮುಗಿದ ಬಳಿಕ ಒಣಗಿದ ಹೂವುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಕೆಲವು ಮಾರ್ಗಸೂಚಿಗಳನ್ನು ಉಲ್ಲೇಖಿಸಲಾಗಿದೆ.
ಈ ಮೂರು ತಪ್ಪುಗಳನ್ನು ಮಾಡಬೇಡಿ
1. ಕಸದ ಬುಟ್ಟಿಗೆ ಎಸೆಯಬೇಡಿ
ದೇವರಿಗೆ ಅರ್ಪಿಸಿದ ಹೂವುಗಳನ್ನು ಸಾಮಾನ್ಯ ಕಸದೊಂದಿಗೆ ಎಸೆಯುವುದು ಸೂಕ್ತವಲ್ಲ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ. ಪೂಜಿತ ವಸ್ತುಗಳನ್ನು ಗೌರವದಿಂದ ವಿಲೇವಾರಿ ಮಾಡಬೇಕು ಎಂಬುದು ಸಂಪ್ರದಾಯ.
2. ರಸ್ತೆ ಅಥವಾ ಕಾಲುದಾರಿಯಲ್ಲಿ ಚೆಲ್ಲಬೇಡಿ
ನಿರ್ಮಾಲ್ಯವನ್ನು ರಸ್ತೆ, ಪಾದಚಾರಿ ಮಾರ್ಗ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದನ್ನು ತಪ್ಪಿಸಬೇಕು. ಇವುಗಳ ಮೇಲೆ ಜನರು ತುಳಿಯುವ ಸಾಧ್ಯತೆ ಇರುವುದರಿಂದ ಧಾರ್ಮಿಕವಾಗಿ ಇದು ಗೌರವಯುತ ಕ್ರಮವೆಂದು ಪರಿಗಣಿಸಲಾಗುವುದಿಲ್ಲ.
3. ಪೂಜಾ ಕೋಣೆಯಲ್ಲಿ ದೀರ್ಘಕಾಲ ಇಡಬೇಡಿ
ಒಣಗಿದ ಅಥವಾ ಬಾಡಿಹೋದ ಹೂವುಗಳನ್ನು ಹಲವು ದಿನಗಳ ಕಾಲ ಪೂಜಾ ಸ್ಥಳದಲ್ಲೇ ಇಡುವುದು ಒಳ್ಳೆಯದು ಅಲ್ಲ ಎಂದು ಹೇಳಲಾಗುತ್ತದೆ. ಪೂಜೆ ಬಳಿಕ ಅವುಗಳನ್ನು ಸಮಯಕ್ಕೆ ಸರಿಯಾಗಿ ತೆರವುಗೊಳಿಸುವುದು ಉತ್ತಮ.
ಗಿಡಗಳಿಗೆ ಗೊಬ್ಬರವಾಗಿ ಬಳಸಿ
ಪೂಜೆಯ ಹೂವುಗಳನ್ನು ಮನೆಯ ತೋಟ ಅಥವಾ ಕುಂಡಗಳ ಮಣ್ಣಿನಲ್ಲಿ ಹಾಕಿದರೆ ಅವು ನೈಸರ್ಗಿಕ ಗೊಬ್ಬರವಾಗಿ ಪರಿವರ್ತನೆಯಾಗಿ ಪರಿಸರಕ್ಕೂ ಉಪಯುಕ್ತವಾಗುತ್ತವೆ.
ಜಲಮೂಲದಲ್ಲಿ ವಿಸರ್ಜನೆ
ಸಾಧ್ಯವಾದಲ್ಲಿ ಹೂವುಗಳನ್ನು ನದಿ, ಕೆರೆ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸಬಹುದು. ಆದರೆ ಪ್ಲಾಸ್ಟಿಕ್ ಚೀಲಗಳು ಅಥವಾ ಇತರೆ ತ್ಯಾಜ್ಯಗಳನ್ನು ನೀರಿಗೆ ಹಾಕದಂತೆ ಎಚ್ಚರಿಕೆ ವಹಿಸಬೇಕು.
ಧೂಪ ತಯಾರಿಸಿ ಬಳಸಿ
ಗುಲಾಬಿ, ಚೆಂಡುಹೂವು ಸೇರಿದಂತೆ ಒಣಗಿದ ಹೂವಿನ ದಳಗಳನ್ನು ಪುಡಿ ಮಾಡಿ ಸಾಂಬ್ರಾಣಿ, ತುಪ್ಪ ಹಾಗೂ ಕರ್ಪೂರದೊಂದಿಗೆ ಬೆರೆಸಿ ಧೂಪವಾಗಿ ಬಳಸಬಹುದು. ಇದರಿಂದ ಮನೆಯ ವಾತಾವರಣ ಸುಗಂಧಮಯವಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ನಿರ್ಮಾಲ್ಯವನ್ನು ಗೌರವದಿಂದ ವಿಲೇವಾರಿ ಮಾಡುವುದು ಪೂಜೆಯ ಅವಿಭಾಜ್ಯ ಅಂಗವಾಗಿದೆ. ಜೊತೆಗೆ ಪರಿಸರ ಸ್ನೇಹಿ ವಿಧಾನಗಳನ್ನು ಅನುಸರಿಸುವುದು ಪ್ರಕೃತಿ ಸಂರಕ್ಷಣೆಯ ದೃಷ್ಟಿಯಿಂದಲೂ ಉತ್ತಮ ಕ್ರಮವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











