ಕುರುಗೋಡು. (ಮೇ.22) ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ಮುಖಮುಖಿಯಾಗಿ ಅಪಘಾತ ಸಂಭವಿಸಿರುವ ಘಟನೆ ಸೋಮಸಮುದ್ರ ಹೊರವಲಯಲ್ಲಿ ನಡೆದಿದೆ.
ಸಿರುಗುಪ್ಪ ದಿಂದ ಜಿಂದಾಲ್ ಗೆ ತೆರಳುತಿದ್ದ ಲಾರಿ ಮತ್ತು ಬೆಂಗಳೂರಿನಿಂದ ಯಾದಗಿರಿಗೆ ಹೋಗುತಿದ್ದ ಬಸ್ ಈ ವೇಳೆ ಅಪಘಾತಕ್ಕೀಡಾಗಿವೆ. ಲಾರಿ ಮತ್ತು ಬಸ್ ಗಳು ಸ್ಥಳದಲ್ಲಿ ಜಖಂಗೊಂಡಿವೆ.
ಬಸ್ ಡ್ರೈವರ್ ತೆಲೆಗೆ ಬಲವಾದ ಪೆಟ್ಟಾಗಿದೆ. ಕಂಡಕ್ಟರ್ ಎರಡು ಕಾಲಿಗೆ ಪೆಟ್ಟು ಬಿದ್ದಿದೆ.
ಬಸ್ ನ ಮುಂದೆ ಕೂತು ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಕಾಲಿನ ಹೆಬ್ಬರಳು ಕಟ್ ಆಗಿದೆ.
ಇನ್ನೂ ಲಾರಿಯ ಡ್ರೈವರ್ ಗೆ ಹಾಗೂ ಕಂಡಕ್ಟಾರ್ ಇವರ ಇಬ್ಬರ ಕಾಲಿಗೆ ಪೆಟ್ಟು ಬಡಿದು ಸಣ್ಣಪುಟ್ಟ ಗಾಯಗಳು ಆಗಿವೆ ಇನ್ನೂ ಬಸ್ ನಲ್ಲಿ ಪ್ರಯಾಣ ಮಾಡುತಿದ್ದ 14 ಜನರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಗೆ ಕರೆದೋಯ್ಯಲಾಗಿದೆ.
ಈ ಘಟನೆಯನ್ನು ಕಂಡ ಸಾರ್ವಜನಿಕರಿಗೆ ಭಯ ಭೀತಿ ಗೊಂಡಿದ್ದು, ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಕುರುಗೋಡು ಪೊಲೀಸ್ ಠಾಣೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







