Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಕುರಿ ಕಾಯುತ್ತಿದ್ದ ಬಸಾಪುರದ ಬಾಲಕನನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ..!

---Advertisement---

 

ಸುದ್ದಿಒನ್, ಚಿತ್ರದುರ್ಗ : ಅದೆಷ್ಟೋ ಮಕ್ಕಳು ಇಂದಿಗೂ ಮನೆಯ ಬಡತನಕ್ಕೆ ಬೆಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರದ ಗ್ರಾಮದಲ್ಲೂ ಬಾಲಕನೊಬ್ಬ ಶಾಲೆಗೆ ಹೋಗದೆ, ಕುರಿ ಮೇಯಿಸುತ್ತಿದ್ದ. ಇದೀಗ ಸಿಎಂ ಸಿದ್ದರಾಮಯ್ಯ ಅವರ ನೆರವಿನಿಂದ ಶಾಲೆಗೆ ಸೇರಿದ್ದಾನೆ.

ಬಸಾಪುರ ಗ್ರಾಮದ ಯೋಗೀಶ್ ಗೆ ಓದುವುದಕ್ಕೆ ಆಸಕ್ತಿ ಇತ್ತು. ಆದರೆ ಅವರ ತಂದೆ ತಾಯಿ ಬಲವಂತವಾಗಿ ಓದು ಬಿಡಿಸಿ, ಕಳೆದ ಎರಡು ವರ್ಷದಿಂದ ಕುರಿ ಮೇಯಿಸಲು ಕಳುಹಿಸಿದ್ದರು.

ಈ ವಿಚಾರ ತಿಳಿದ ಗ್ರಾಮದ ಮಹೇಂದ್ರ ಎಂಬುವಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯೋಗೀಶ್ ಬಗ್ಗೆ ಬರೆದು, ಟ್ಯಾಗ್ ಮಾಡುವ ಮೂಲಕ ಸರ್ಕಾರಕ್ಕೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಸಿದ್ದರಾಮಯ್ಯ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಚಿತ್ರದುರ್ಗದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಬಾಲಕನ ಮನೆಗೆ ತೆರಳಿದ್ದಾರೆ. ಆತನ ತಂದೆ ತಾಯಿಗೆ ಶಿಕ್ಷಣದ ಬಗ್ಗೆ ತಿಳಿಸಿ, ಬಾಲಕನನ್ನು ಶಾಲೆಗೆ ಕಳುಹಿಸುವಂತೆ ಮಾಡಿದ್ದಾರೆ. 24 ಗಂಟೆಯಲ್ಲಿ ಈ ಕೆಲಸವಾಗಿದೆ. ಸದ್ಯ ಯೋಗೀಶ್ 6ನೇ ತರಗತಿಯಲ್ಲಿ ಬಸಾಪುರ ಸರ್ಕಾರಿ ಶಾಲೆಗೆ ಸೇರಿದ್ದಾನೆ. ಮಹೇಂದ್ರ ಅವರಿಗೂ ಸಾಕಷ್ಟು ಜನ ಧನ್ಯವಾದ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...