ಬೆಂಗಳೂರು: ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಒಳಮೀಸಲಾತಿ ವಿಚಾರಕ್ಕೆ ಚರ್ಚೆ ನಡೆದಿದೆ. ಇದೀಗ ಸಂಪುಟ ಸಭೆಯಲ್ಲಿ ದಲಿತ ಸಮುದಾಯಕ್ಕೆ ನೀಡುವ ಒಳ ಮೀಸಲಾಗಿ ವಿಚಾರ ಬಹುತೇಕ ಫೈನಲ್ ಆಗಿದೆ. ಇಂದು ಅಧಿಕೃತವಾಗಿ ಘೋಷಣೆ ಮಾಡುವುದೊಂದೆ ಬಾಕಿ ಇದೆ.
ಬಹಳಷ್ಟು ವರ್ಷಗಳ ಹೋರಾಟದ ಫಲವಾಗಿ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟ ಬೆನ್ನಲ್ಲೇ ದಲಿತ ಸಮುದಾಯದವರು ಸಿಕ್ಕಾಪಟ್ಟೆ ಸಂತಸಗೊಂಡಿದ್ದು, ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಐದು ವರ್ಗೀಕರಣ ಮಾಡಲಾಗಿತ್ತು. ಸರ್ಕಾರ ಇದನ್ನು ಮೂರು ಗುಂಪುಗಳಾಗಿ ವರ್ಗೀಕರಣ ಮಾಡಿತ್ತು.
ಎಡಗೈ ಸಮುದಾಯದಲ್ಲಿ 18 ಜಾತಿಗಳಿದ್ದು, ಶೇ.6ರಷ್ಟು ಮೀಸಲಾತಿ, ಬಲಗೈ ಸಮುದಾಯದಲ್ಲಿ 20 ಜಾತಿಗಳಿದ್ದು ಶೇಕಡ 6ರಷ್ಟು ಮೀಸಲಾತಿ ಲಭಿಸಿದೆ. ಇತರ ಸಮುದಾಯದ 63 ಜಾತಿಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಅಂತಿಮವಾಗಿದೆ. ಸದ್ಯಕ್ಕೆ ಘೋಷಣೆಯೊಂದೆ ಬಾಕಿ ಇದೆ. ಈ ದಿನಕ್ಕಾಗಿ ದಲಿತ ಸಮುದಾಯದವರು ಕಾಯುತ್ತ ಇದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟ ಬೆನ್ನಲ್ಲೇ ಫುಲ್ ಖುಷಿಯಾಗಿದ್ದಾರೆ.

ಅಧಿಕೃತವಾಗಿ ಘೋಷಣೆ ಮಾಡುವುದಕ್ಕೂ ಮುನ್ನವೇ ಸಿದ್ದರಾಮಯ್ಯ ಅವರಿಗೆ ಸಿಹಿ ಹಂಚಿ, ದಲಿತ ಸಮುದಾಯದವರು ಖುಷಿ ಪಟ್ಟಿದ್ದಾರೆ. ಒಳಮೀಸಲಾತಿ ಜಾರಿಯಾಗುವ ಎಲ್ಲಾ ನಿರೀಕ್ಷೆ ಮೂಡಿದೆ. ಹೀಗಾಗಿ ಅಷ್ಟು ವರ್ಷಗಳು ಕಾಯ್ತಿದ್ದ ದಿನ ಹತ್ತಿರ ಬಂದಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.









