Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಕುರ್ಚಿ ಪಾಂಚಾಲಿ ಥರ.. ಗಂಡ ಯಾರು ಅನ್ನೋದೇ ಗೊತ್ತಾಗ್ತಿಲ್ಲ : ಸಿ.ಎಂ.ಇಬ್ರಾಹಿಂ

---Advertisement---

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ‌ ಕಾಳಗ ದೊಡ್ಡ ಮಟ್ಟಕ್ಕೆ ನಡೆಯುತ್ತಲೆ ಇದೆ. ಅದರಲ್ಲೂ ನಾನು ಕೊಡೆ ನೀನು ಬಿಡೆ ಎಂಬ ಮಟ್ಟಕ್ಕೆ ಹೋಗಿದೆ. ಹೀಗಿರುವಾಗ ಇದರ ನಡುವೆ ಸಂಧಾನ, ಸಮಾಧಾನದ ವಿಚಾರಗಳು ನಡೆಯುತ್ತಿವೆ. ಇದೀಗ ಸಿ.ಎಂ ಇಬ್ರಾಹಿಂ ಕೂಡ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಇಬ್ರಾಹಿಂ ಅವರು, ಸಿದ್ದರಾಮಯ್ಯ ಅವರು ದೇವೇಗೌಡರಿಂದ ಹೊರಗೆ ತಂದು ಮೈಸೂರಿನಲ್ಲಿ 225 ವೋಟ್ ನಿಂದ ಗೆಲ್ಲಿಸಿ. ಮತ್ತೆ ಚಾಮುಂಡಿಯಲ್ಲಿ ಸೋತವ್ರೆ ಅಂತ ಗೊತ್ತಾದಾಗ ಬಾದಾಮಿಗೆ ಕರೆದುಕೊಂಡು ಹೋದರು. ಅಂದು ಅವರು ಗೆಲ್ಲಿಸಿ ಇಂದು ಮುಖ್ಯಮಂತ್ರಿ ಆಗಿದ್ದಾರೆ. ನಾವೂ ಮನೆ ಕಟ್ಟುತ್ತಾ ಇದ್ದೀವಿ. ಮನೆ ಕಟ್ಟಿದ ಮೇಲೆ ಕಟ್ಟಿದವರು ಹೊರಗೆ ಹೊರಗಿನವರು ಒಳಗೆ.

ಇವತ್ತು ಈ ರಾಜ್ಯದಲ್ಲಿ ಒಬ್ಬ ದಲಿತ, ಒಬ್ಬ ಮುಸಲ್ಮಾನ ಮುಖ್ಯಮಂತ್ರಿ ಆಗಬೇಕು ಅಂತ ಯಾವುದೇ ರಾಜಕೀಯ ಪಕ್ಷ ಬಾಯ್ಬಿಟ್ಟು ಹೇಳುವುದಕ್ಕೂ ತಯಾರಿಲ್ಲ. ಮಾಡದೆ ಇದ್ದರು ಪರವಾಗಿಲ್ಲ ಸ್ಯಾಂಪಲ್ ಆದರೂ ಹೇಳ್ಬೇಕು ಅಲ್ವಾ. ಆಮೇಲೆ ಅವರ ಶೋಕೇಸ್ ನಲ್ಲಿ ಇಡುವ ಪೀಸ್ ಗಳನ್ನ ನೋಡಿದ್ರೆ ಹೆಸರಿಗೆ ಮಾತ್ರ ಆ ಜಾತಿ. ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕೂಡ ಹಂಚಿಕೊಂಡಂತೆ ಕಾಣಿಸ್ತಾ ಇದೆ. ಐದು ವರ್ಷ ನಮಗೆ ಐದು ವರ್ಷ ನಿಮಗೆ ಅಂತ. ನಾನು ಹೊಡೆದಂಗೆ ಮಾಡ್ತೀನಿ ನೀನ್ ಅತ್ತಂಗೆ ಮಾಡು ಎಂಬಂತೆ. ಸಮರ್ಥವಾದಂತ ವಿರೋಧ ಪಕ್ಷವೂ ಇಲ್ಲ, ಸಮರ್ಥವಾದಂತ ಆಡಳಿತ ಪಕ್ಷವೂ ಇಲ್ಲ. ಈ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ನಾನಾಗಬೇಕಾ..? ನೀನಾಗಬೇಕಾ..? ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಪಾಂಚಾಲಿ ಥರ ಆಗಿದೆ. ಯಾರು ಗಂಡ ಅಂತ ಹೇಳುವುದಕ್ಕೆ ಆಗ್ತಿಲ್ಲ. ಹೈಕಮಾಂಡ್ ಹೇಳಿಬಿಟ್ರು ನೀನು ನೀನು ಅಂತ ಎಂದು ವ್ಯಂಗ್ಯವಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now