Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದ ವಿಜಯೇಂದ್ರ ಅವರಿಗೆ ಸಿಎಂ ತಿರುಗೇಟು..!

---Advertisement---

 

 

ಮೈಸೂರು: ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ನೀಡಿದ ಹೇಳಿಕೆಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಮೈಸೂರಲ್ಲಿ ಸಾಧನಾ ಸಮಾವೇಶ ಮಾಡುತ್ತಿರುವುದನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. 2650 ಕೋಟಿ ಸುಮ್ ಸುಮ್ನೆ ಮಾಡ್ತಾರಾ. ಬಿಜೆಪಿಯವರು ಏನ್ ಮಾಡಿದ್ದಾರೆ. ನಮಗೆಲ್ಲಾ ಇದ್ದೇನೆ ಅಧಿಕಾರ ನಡೆಸ್ತಾ ಇದ್ದೀವಿ ಎಂದಿದ್ದಾರೆ. ಹಾಗಾದ್ರೆ ಅವರು ಪ್ರಧಾನಿ ಸ್ಥಾನವನ್ನು ದಲಿತರಿಗೆ ಬಿಟ್ಟುಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

 

ಇದೇ ವೇಳೆ ಸಿಎಂ ಅವರ ಶಕ್ತಿ ಪ್ರದರ್ಶನ ಸಿಎಂ ಸೀಟನ್ನು ಬಿಗಿ ಮಾಡಿಕೊಳ್ಳುವುದಕ್ಕಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಇಲ್ಲಿ ಯಾರ ಶಕ್ತಿ ಪ್ರದರ್ಶನವೂ ಅಲ್ಲ. ಪಾರ್ಟಿ ಮಾಡಿರುವಂತ ಕೆಲಸಗಳನ್ನು ಜನರ ಮುಂದೆ ಇಡುವಂತದ್ದು, ಜನರಿಗೆ ತಿಳಿಸುವಂತದ್ದು. ಯಾಕಂದ್ರೆ ಸುಳ್ಳು ಅಪಪ್ರಚಾರ ಮಾಡ್ತಾ ಇದಾರೆ. ಏನು ಮಾಡ್ತಾ ಇಲ್ಲ ಸರ್ಕಾರ. ಗ್ಯಾರಂಟಿ ಯೋಜನೆಗಳಿಗೆ ದುಡ್ಡಿಲ್ಲ, ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳ್ತಾ ಇದೆ. ದುಡ್ಡಿಲ್ಲದೆ ಹೋಗಿದ್ರೆ 2600 ಕೋಟಿ ಮಾಡೋದಕ್ಕೆ ಆಗ್ತಾ ಇತ್ತ. ಬರೀ ಒಂದು ಸಿಟಿಗೆ ಎಂದಿದ್ದಾರೆ.

ಇದೆ ವೇಳೆ ಮತ್ತೆ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಪ್ರಶ್ನೆ ಮಾಡಿದಾಗ, ಯಾರೂ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ್ದಾರೋ ಅವರ ಬಳಿ ಕೇಳಿ. ನಮ್ಮದೇ ಪಕ್ಷದವರೇ ಆದ್ರೂ ಅವರ ಬಳಿಯೇ ಕೇಳಿ. ನನ್ನ ಬಳಿ ಅಂತು ಏನು ಹೇಳಿಲ್ಲ ಎಂದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿಯಂತು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಯಾವ ರೀತಿಯಾದ ಕ್ರಾಂತಿಯಾಗಬಹುದು ಎಂದು ಜನ ಕೂಡ ಕಾಯ್ತಾ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...