CM Basavaraj Bommai: ಶೋಭಕ್ಕ ಮಾತಾಡುವ ಮುನ್ನವೇ ಮಾತಾಡಬೇಕಿತ್ತು.. ಹಿಂಗ್ಯಾಕ್ ಅಂದ್ರು ಸಿಎಂ..?

suddionenews
1 Min Read

 

ಪಠ್ಯಕ್ರಮ ಪರಿಷ್ಕರಣ ಬದಲಾವಣೆಗೆ ದೇವೇಗೌಡರ ಪತ್ರದ ವಿಚಾರವಾಗಿ, ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ ನೀಡಿದ್ದು, ಇದರ ಬಗ್ಗೆ ಚರ್ಚಿಸಲು ಸಭೆ ನಡೆಸ್ತೇನೆ. ಸಭೆ ಬಳಿಕ ಮಾಹಿತಿ ತಿಳಿಸ್ತೇನೆ ಎಂದಿದ್ದಾರೆ.

ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶೋಭಕ್ಕನ ಮಾತು ಕೇಳಿದ ಮೇಲೆ ಜನ ನಮ್ಮ ಮಾತನ್ನು ಕೇಳುವ ಇಚ್ಚೆಯಲ್ಲಿಲ್ಲ. ನಾನು ಮೊದಲೆ ಮಾತನಾಡಬೇಕಿತ್ತು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಈಗಷ್ಟೇ ಅಂತರಾಷ್ಟ್ರೀಯ ಮಟ್ಟದ ಫರ್ನಿಶಿಂಗ್ ಸ್ಟೋರ್ ಉದ್ಘಾಟನೆ ಮಾಡಿ ಬಂದೆ. ಆ ಸಂಸ್ಥೆಯ CEO, ಬೆಂಗಳೂರು ಮುಖಸ್ಥರು. ಸ್ಟೋರ್‌ನಲ್ಲಿ ಕೆಲಸ ಮಾಡುವ ಬಹುತೇಕರು ಮಹಿಳೆಯರು. ವಿದೇಶದ ಮಹಿಳೆಯರು ಇಲ್ಲಿ ಬಂದು ವ್ಯಾಪಾರ ಮಾಡಿ ಲಾಭ ಗಳಿಸುವಾಗ. ನಮ್ಮ ಸ್ತ್ರೀಶಕ್ತಿ ಸಂಘದಲ್ಲಿ ತಯಾರಾಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗಬೇಕು ಎಂಬುದು ನನ್ನ ಆಸೆ.

ದೇಶದಲ್ಲಿ 51% ಗಿಂತ ಹೆಚ್ಚಾಗಿರುವ ಹೆಣ್ಣುಮಕ್ಕಳಿಗೆ ಸಿಗಬೇಕಾದ ಬೆಲೆ,ಗೌರವ ಸಿಗಬೇಕು. ದುಡಿಯಲು ಅವಕಾಶ ಕೊಟ್ಟಾಗ ಆಗ ಹೆಣ್ಣುಮಕ್ಕಳಿಗೆ ಬೆಲೆ ಸಿಗುತ್ತೆ. ಸೇವಾಸಂಸ್ಥೆಯನ್ನು ಕಟ್ಟುವದರಿಂದ ಮಹಿಳೆಯರಿಗೆ ಆತ್ಮವಿಶ್ವಾಸ ಸಿಗುತ್ತೆ. ಈ ಮೂಲಕ ಒಂದು ಕ್ರಾಂತಿಯನ್ನೆ ಮಾಡಿದ್ದಾರೆ. ಸೇವಾಸಂಸ್ಥೆ ಮೂಲಕ ಅನಾಥರಿಗೆ. ಬಡವರಿಗೆ ಸಹಾಯ ಮಾಡಿದೆ ಅಂದ್ರೆ ನಿಮ್ಮ ಪ್ರೇರಣೆ ಹೆಚ್ಚಾಗುತ್ತೆ. ನೀವು ಸಾಕಷ್ಟು ಒಳ್ಳೆಯ ಕೆಲಸ ಮಾಡ್ತಿದ್ದಿರಾ ಅದನ್ನು ಆನಂದಿಸಿ. ಮತ್ತು ನಿಮ್ಮ ಸೇವಾಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು ಹೇಗೆ ಅಂತ ಯೋಚನೆ ಮಾಡಿ. ಒಂದು ಪ್ಲಾನ್ ಆಫ್ ಆಕ್ಷನ್ ಇಟ್ಡುಕೊಂಡು ಬನ್ನಿ. ನಿಮಗೆ ಬೇಕಾದ ಸಹಾಯ ಸರ್ಕಾರ ಮಾಡುತ್ತೆ ಎಂದು ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *