ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ನಗರದ ಸ್ಟೇಡಿಯಂ ರಸ್ತೆಯ ಬುದ್ಧನಗರದ ನಿವಾಸಿ ಯೋಗೇಶ್ವರಯ್ಯ (44 ವರ್ಷ) ಅವರು ನಿನ್ನೆ (ಸೆಪ್ಟೆಂಬರ್. 28) ಸಂಜೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾದ ಬಂಧುಬಳಗದವರನ್ನು ಅಗಲಿದ್ದಾರೆ. ಅವರು ನಿನ್ನೆ ತಮ್ಮ ಮನೆಯಲ್ಲಿ ನಡೆದ ಶುಭ ಸಮಾರಂಭವೊಂದರಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ಮದ್ಯಾಹ್ನದ ವೇಳೆಗೆ ಲೋ ಶುಗರ್ ನಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಾಸ್ ಮರಳಿದ್ದರು. ಆದರೆ ಪುನಃ ನಿನ್ನೆ ಸಂಜೆ 6 ಗಂಟೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಕಳೆದ ಆಗಸ್ಟ್ 28 ರಂದು ಯೋಗೇಶ್ವರಯ್ಯ ಅವರ ತಂದೆ ಕುಬೇಂದ್ರಯ್ಯ ಕೂಡ ವಯೋಸಹಜವಾಗಿ ಸಾವನ್ನಪ್ಪಿದ್ದರು. ಒಂದೇ ತಿಂಗಳಲ್ಲಿ ಮನೆಯ ಇಬ್ಬರು ಆಧಾರ ಸ್ತಂಬಗಳನ್ನು ಕಳೆದುಕೊಂಡ ಮೃತನ ತಾಯಿ ಗೌರಮ್ಮನವರಲ್ಲಿ ಆತಂಕ ಮನೆಮಾಡಿದೆ. ಮೃತರ ಅಂತ್ಯಕ್ರಿಯೆ ಜಟ್ ಪಟ್ ನಗರದ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






