ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ರಾಜ್ಯ ಪಠ್ಯಕ್ರಮ ವಿಭಾಗದ ವಿದ್ಯಾರ್ಥಿಗಳು ಸೆಪ್ಟೆಂಬರ್ 21 ರಂದು ಚಿತ್ರದುರ್ಗದಲ್ಲಿ ನಡೆದ 17 ವರ್ಷದೊಳಗಿನ ತಾಲ್ಲೂಕು ಮಟ್ಟದ ಅಥ್ಲೆಟಿಕ್ ಹಾಗೂ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಸ್ಥಾನಗಳಿಸಿ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಾಗೂ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ :

• ಸಮೃಧ್ ಪಿ ಸಿ 10ನೇ ತರಗತಿ 800ಮೀ, 1500ಮೀ, 3000ಮೀ 4 ಘಿ 400 ಮೀ ರಿಲೆ ಪ್ರಥಮ ಸ್ಥಾನ.
• ಇಂದುಧರ್ ಆರ್ 10ನೇ ತರಗತಿ 110 ಮೀ ಹರ್ಡಲ್ಸ್, 400 ಮೀ ಹರ್ಡಲ್ಸ್, 4 ಘಿ 400 ಮೀ ರಿಲೆ ಪ್ರಥಮ ಸ್ಥಾನ.
• ಸುಹಾಸ್ ಡಿ.ವಿ 10ನೇ ತರಗತಿ 4 ಘಿ 400 ಮೀ ರಿಲೆ ಪ್ರಥಮ ಸ್ಥಾನ
• ವಿಕಾಸ ನಾಯಕ ಕೆ.ಎಂ 9ನೇ ತರಗತಿ 4 ಘಿ 400 ಮೀ ರಿಲೆ ಪ್ರಥಮ ಸ್ಥಾನ
• ಉಮಾಶಂಕರ್ ಪಿ.ಜಿ 9ನೇ ತರಗತಿ 400 ಮೀ ಹರ್ಡಲ್ಸ್, ದ್ವಿತೀಯ ಸ್ಥಾನ
ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆ :
• ಮಮ್ಮು ಟಿ 10 ನೇ ತರಗತಿ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
• ಅಕ್ಷರ ಎಂ 9ನೇ ತರಗತಿ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
• ಸೈಯದಾ ಅನುಮ್ 9ನೇ ತರಗತಿ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಹಾಗೂ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಈ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಶ್ರೀಮತಿ ಸುನಿತಾ.ಪಿ.ಸಿ, ಐಸಿಎಸ್‍ಇ ಪ್ರಾಚಾರ್ಯರಾದ, ಬೀನಾ ಎ ಜಾನ್ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.











