ಸುದ್ದಿಒನ್, ಚಿತ್ರದುರ್ಗ, ನವ : ಪತ್ರಕರ್ತ ಹಾಗೂ ಸಾಹಿತಿ ತುರುವನೂರು ಮಂಜುನಾಥ್ ರವರ ನೂತನ ಗೃಹ ಪ್ರವೇಶದ ಅಂಗವಾಗಿ, ಅವರ ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ನವೆಂಬರ್ 16 ರ ನಾಳೆ ಬೆಳಿಗ್ಗೆ 10.30ಕ್ಕೆ ತುರುವನೂರಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ವೈ. ಸೋಮಶೇಖರ್ ಹಾಗೂ ಹಿರಿಯೂರಿನ ರೈತ ಹೋರಾಟಗಾರರಾದ ಲಕ್ಷ್ಮಣ್ ಹೂಗಾರ್ ಭಾಗವಹಿಸಲಿದ್ದಾರೆ.
ಜೊತೆಗೆ ಖ್ಯಾತ ಟಿವಿ ನಿರೂಪಕರಾದ ಜಯಪ್ರಕಾಶ್ ಶೆಟ್ಟಿ, ವಿಸ್ತಾರ ಟಿವಿಯ ನಿರೂಪಕಿ ವಿದ್ಯಾ ಮಲ್ನಾಡ್ ಮತ್ತು ನಿವೃತ್ತ ಐ.ಎ.ಎಸ್ ಅಧಿಕಾರಿ ಟಿ.ಎನ್. ಶಿವಮೂರ್ತಿ ಅವರು ಉಪಸ್ಥಿತರಿರಲಿದ್ದಾರೆ.











