ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಮೇಲುಗೈ ಸಾಧಿಸಿದ ನಿಶಾನಿ ಜಯ್ಯಣ್ಣ, ಈಶ್ವರಪ್ಪ ಬಣ
Chitradurga Town Primary Agricultural Farmer Cooperative Society Election: Nishani Jayyanna, Eshwarappa faction won
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂನ್ 23 : ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಲ್ಲಿನ ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ಮುಂದಿನ 5 ವರ್ಷಗಳ ಆವಧಿಗೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಿತು. ಇದರಲ್ಲಿ ನಿಶಾನಿ ಜಯ್ಯಣ್ಣ ನೇತೃತ್ವದಲ್ಲಿ ಈಶ್ವರಪ್ಪರವರ ಸಾರಥ್ಯದಲ್ಲಿ 7 ಜನರ ತಂಡ ನಿರ್ದೆಶಕರಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರ ಕ್ಷೇತ್ರದಿಂದ ಸ್ಪರ್ದೆ ನಡೆದಿದ್ದು, ಇದರಲ್ಲಿ 19 ಜನ ಸ್ಪರ್ದೆ ಮಾಡಿದ್ದರು.
ಇದರಲ್ಲಿ 8 ಜನರನ್ನು ಆಯ್ಕೆ ಮಾಡಬೇಕಿತ್ತು, ಸಾಲಗಾರರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ
1) ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಎ.ಈಶ್ವರಪ್ಪ (318),
2) ಪರಿಶಿಷ್ಟ ಜಾತಿ ಮೀಸಲಿನಿಂದ ಏಕಾಂತಪ್ಪ (279),
3) ಸಾಮಾನ್ಯ ಸ್ಥಾನದಿಂದ ಎಸ್.ಜಯ್ಯಪ್ಪ(292),
4) ಎಸ್.ತಿಮ್ಮಪ್ಪ(304),
5) ಎಂ.ನಿಶಾನಿ ಜಯ್ಯಣ್ಣ (307),
6) ಎಂ.ಜಿ. ಮಲ್ಲಿಕಾರ್ಜನ್ (304),
7) ಎ.ಮೂರ್ತಿ (253),
8) ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನದಿಂದ ಸಿ.ಹೆಚ್. ಸೂರ್ಯಪ್ರಕಾಶ್ (273) ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಲಕ್ಷ್ಮೀ ನರಸಿಂಗಮ್ (90) ಮತಗಳನ್ನು ಪಡೆದು ಜಯಶಾಲಿ ಯಾಗಿದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ 770 ಜನ ಸಾಲಗಾರರಲ್ಲದ ಕ್ಷೇತ್ರದಲ್ಲಿ 137 ಜನ ಮತದಾರಿದ್ದರೆ.
ಇದಕ್ಕೂ ಮುನ್ನಾ ಪರಿಶಿಷ್ಟ ಪಂಗಡದಿಂದ ಪಾಪೇಶ್ ಹಾಗೂ ಮಹಿಳಾ ಮೀಸಲಾತಿ ಕ್ಷೇತ್ರದಿಂದ ಶೇಖಮ್ಮ, ಮತ್ತು ಲಕ್ಷ್ಮೀದೇವಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಿಶಾನಿ ಜಯ್ಯಣ್ಣ ಹಾಗೂ ಈಶ್ವರಪ್ಪರವರ ಬಣ ಮೇಲುಗೈ ಸಾಧಿಸಿದೆ. ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಎ.ಈಶ್ವರಪ್ಪ, ಎಂ.ನಿಶಾನಿ ಜಯ್ಯಣ್ಣ ಹಾಗೂ ಹೂವಿನ ತಿಮ್ಮಪ್ಪ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















