Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 10.37 ಲಕ್ಷ ರೂಪಾಯಿ ಲಾಭದಲ್ಲಿದೆ : ಎಂ.ನಿಶಾನಿ ಜಯಣ್ಣ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ : ಹೊಸದಾಗಿ ಸೇಫ್ ಲಾಕರ್ ಮಾಡಿದ್ದೇವೆ. ಶೇ.10 ರ ಬಡ್ಡಿ ದರದಲ್ಲಿ ಐದು ಲಕ್ಷ ರೂ.ವರೆಗೆ ಗೋಲ್ಡ್ ಲೋನ್ ನೀಡಲು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಸರ್ವ ಸದಸ್ಯರುಗಳು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಮನವಿ ಮಾಡಿದರು.

ಭಾನುವಾರ ನಡೆದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 2021-22 ನೇ ಸಾಲಿನ 105 ನೇ ಸರ್ವ ಸದಸ್ಯರ ಮಹಾಸಭೆಯನ್ನು ಸೊಸೈಟಿ ಮುಂಭಾಗದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಿಬ್ಬಂದಿ ವೇತನ, ಖರ್ಚು, ತೆರಿಗೆ ಎಲ್ಲಾ ತೆಗೆದು ಸೊಸೈಟಿ ಹತ್ತು ಲಕ್ಷ 33 ಸಾವಿರದ 337 ರೂ.ಲಾಭದಲ್ಲಿದೆ. ಹಣ ಪೋಲಾಗುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿ ಬಂದರೆ ಠೇವಣಿಯಿಡುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಮುಂದಿನ ತಿಂಗಳು ಸೊಸೈಟಿಯ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಹಕಾರ ಸಚಿವರನ್ನು ಕಂಡು ಬಂದಿದ್ದೇವೆ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ನೇತೃತ್ವದಲ್ಲಿ ಶತಮಾನೋತ್ಸವ ಆಚರಣೆಗೆ ರೂಪುರೇಷೆಗಳನ್ನು ತಯಾರಿಸಲಾಗುತ್ತಿದ್ದು, ಶತಮಾನೋತ್ಸವಕ್ಕಾಗಿ ನಮ್ಮ ಡಿವಿಡೆಂಟ್ ಹಣ ತೆಗೆದುಕೊಳ್ಳಿ ಎಂದು ಎಲ್ಲಾ ಸದಸ್ಯರುಗಳು ಒಪ್ಪಿಗೆ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಸೊಸೈಟಿಯಲ್ಲಿ ಸಾಲ ಪಡೆಯುವವರಿಗಿಂತ ಜಾಮೀನುದಾರರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಸಾಲ ಪಾವತಿಸದವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದಲ್ಲದೆ ಚೆಕ್‍ನ್ನು ನ್ಯಾಯಾಲಯಕ್ಕೆ ಹಾಕಲಾಗುವುದು. ಯಾವುದೇ ಕಾರಣಕ್ಕೂ ಸೊಸೈಟಿಗೆ ನಷ್ಟವಾಗಲು ಬಿಡುವುದಿಲ್ಲ ಎಂದು ನಿಷ್ಟುರವಾಗಿ ನುಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಸಂಘಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಸದಸ್ಯರ ಒಂದು ರೂ.ವನ್ನು ಪೋಲಾಗಲು ಬಿಡುವುದಿಲ್ಲ. ಕೆಲವರ ಕೈಗೆ ಸೊಸೈಟಿ ಸಿಕ್ಕು ದುರುಪಯೋಗವಾಗಿತ್ತು. ಈಗ ಬಡತನವಿಲ್ಲ. ಚೇತರಿಸಿಕೊಳ್ಳುತ್ತಿದೆ. ನಾನು ಅಧ್ಯಕ್ಷನಾಗಿ ಬಂದಾಗಿನಿಂದಲೂ 1600 ಸದಸ್ಯತ್ವ ನೀಡಿದ್ದೇನೆ. 160 ಸೇಫರ್ ಲಾಕ್ ತರುತ್ತೇವೆ. ಇದೇ ತಿಂಗಳು ಸೊಸೈಟಿಯ ಶತಮಾನೋತ್ಸವ ಆಗಬೇಕಿತ್ತು. ಆದರೆ ಸ್ಥಳ ಸಿಗದ ಪರಿಣಾಮ ಮುಂದಿನ ತಿಂಗಳು ನಡೆಸಲಾಗುವುದು. ಮುಖ್ಯಮಂತ್ರಿಗಳನ್ನು ಕರೆಸಬೇಕೆಂಬ ಚಿಂತನೆಯಿತ್ತು. ರಾಜ್ಯದ ಎಲ್ಲಡೆ ಮಳೆಯಿಂದ ಹಾನಿಯಾಗಿರುವುದರಿಂದ ಅವರು ಬರುವುದು ಕಷ್ಟ ಹಾಗಾಗಿ ಸಹಕಾರ ಸಚಿವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪ್ರತಿ ವರ್ಷವೂ ಸರ್ವ ಸದಸ್ಯರ ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಗುತ್ತಿತ್ತು. ಆದರೆ ಈ ಬಾರಿ ಏಕೆ ಪ್ರತಿಭಾ ಪುರಸ್ಕಾರವಿಲ್ಲ ಎಂದು ಹಿರಿಯ ಸದಸ್ಯರೊಬ್ಬರು ಮಹಾಸಭೆಯಲ್ಲಿ ಪ್ರಶ್ನಿಸಿದಾಗ ಮುಂದಿನ ತಿಂಗಳು ನಡೆಯುವ ಸೊಸೈಟಿಯ ಶತಮಾನೋತ್ಸವದಲ್ಲಿ ಪ್ರತಿಭಾ ಪುರಸ್ಕರಿಸಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುವುದೆಂದು ಎಂ.ನಿಶಾನಿ ಜಯಣ್ಣ ಉತ್ತರಿಸಿದರು.

ಸಿಬ್ಬಂದಿಗಳಿಗೆ ಸಮವಸ್ತ್ರ, ಷೇರು ಹಣ ಹೆಚ್ಚಳ ಸೇರಿದಂತೆ ಇನ್ನು ಅನೇಕ ಸಲಹೆ ಸೂಚನೆಗಳನ್ನು ಸದಸ್ಯರುಗಳು ಮಹಾಸಭೆಯಲ್ಲಿ ಅಧ್ಯಕ್ಷರಿಗೆ ನೀಡಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಾ.ರಹಮತ್‍ಉಲ್ಲಾ, ನಿರ್ದೇಶಕರುಗಳಾದ ಬಿ.ಎಂ.ನಾಗರಾಜ್‍ಬೇದ್ರೆ, ಸಿ.ಹೆಚ್.ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸಮೂರ್ತಿ, ಕೆ.ಚಿಕ್ಕಣ್ಣ, ಕೆ.ಪ್ರಕಾಶ್, ಎಸ್.ವಿ.ಪ್ರಸನ್ನ, ಸೈಯದ್ ನೂರುಲ್ಲಾ, ಚಂದ್ರಪ್ಪ, ಶ್ರೀಮತಿ ಎ.ಚಂಪಕ ಅಶೋಕ್, ಶ್ರೀಮತಿ ಎಂ.ಎಸ್.ರಶ್ಮಿ ರಮೇಶ್, ನಾಮ ನಿರ್ದೇಶಕ ಸದಸ್ಯ ಎಸ್.ತಿಮ್ಮಪ್ಪ ವೇದಿಕೆಯಲ್ಲಿದ್ದರು.
ಸೊಸೈಟಿ ವ್ಯವಸ್ಥಾಪಕ ಮಹ್ಮದ್ ನಯೀಮ್ ವಾರ್ಷಿಕ ವರದಿ ಮಂಡಿಸಿದರು. ಪ್ರಕಾಶ್ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ಓದಿದರು.

ಮೃತ ಸದಸ್ಯರುಗಳಿಗೆ ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!