ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉತ್ತಮ ಲಾಭದಲ್ಲಿದೆ : ಅಧ್ಯಕ್ಷ ಎಂ.ನಿಶಾನಿ

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ನ.01) : ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ 2020-21 ನೇ ಸಾಲಿಗೆ ಒಂಬತ್ತು ಲಕ್ಷ ಹತ್ತೊಂಬತ್ತು ಸಾವಿರದ ನೂರ ತೊಂಬತ್ತೆರಡು ರೂ.ಗಳ ಲಾಭದಲ್ಲಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 104 ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಸದಸ್ಯರುಗಳ ಖಾತೆಯಲ್ಲಿ ಡಿವಿಡೆಂಟ್ ಹಣ ಜಮಾ ಮಾಡಲಾಗಿದೆ. ಆಧಾರ್ ಕಾರ್ಡ್ ನೀಡಿ ತೆಗೆದುಕೊಳ್ಳಬಹುದು. ಹೆಚ್ಚು ಡೆಪಾಸಿಟ್ ಮಾಡಿದರೆ ಸೊಸೈಟಿಯನ್ನು ಇನ್ನು ಬಲಪಡಿಸಲು ಸಹಕಾರಿಯಾಗಲಿದೆ. ಡಿವಿಡೆಂಟ್‍ನ ಹಣವನ್ನು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವಕ್ಕೆ ಬಳಸಿಕೊಳ್ಳಲು ಸರ್ವ ಸದಸ್ಯರು ಸಮ್ಮತ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಂ.ನಿಶಾನಿ ಜಯಣ್ಣ. ಕೇಂದ್ರ ಸಚಿವ ಅಮಿತ್‍ಷಾರವರು ಕೃಷಿ ಮತ್ತು ಸಹಕಾರ ಇಲಾಖೆಯನ್ನು ಬೇರ್ಪಡಿಸಿ ಸಹಕಾರ ಇಲಾಖೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಹೇಳಿರುವುದು ಸಹಕಾರ ಇಲಾಖೆಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸೊಸೈಟಿಯ ನೌಕರರಿಗೆ ಹಾಗೂ ಷೇರುದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲು ಬಿಡುವುದಿಲ್ಲ. ಒಂದು ಕೋಟಿ ಇಪ್ಪತ್ತೈದು ಲಕ್ಷ ರೂ.ಗಳ ಕಾಮಗಾರಿಯಾಗಿದ್ದು, ಸೊಸೈಟಿಗೆ ನಲವತ್ತು ಲಕ್ಷ ರೂ.ಗಳ ಬಾಡಿಗೆ ಬರುತ್ತಿದೆ. ಸದಸ್ಯರುಗಳಿಗೆ ಹನ್ನೆರಡು ಪರ್ಸೆಂಟ್ ಡೆವಿಡೆಂಟ್ ಕೊಡಲಾಗುತ್ತಿದೆ. ಹಿರಿಯರಿಗೆ ಒಂದು ಪರ್ಸೆಂಟ್ ಹೆಚ್ಚಿಗೆ ನೀಡುತ್ತೇವೆಂದು ಹೇಳಿದರು.

ಐದು ಕೋಟಿ ರೂ.ಗಳಷ್ಟು ಸಾಲ ತರಬಹುದು. ಡಿ.ಸಿ.ಸಿ.ಬ್ಯಾಂಕ್‍ನಿಂದ ಐವತ್ತು ಲಕ್ಷ ರೂ.ಗಳ ಸಾಲ ಪಡೆಯಲಾಗಿದೆ. ಸಣ್ಣಪುಟ್ಟ ವ್ಯಾಪಾರ ವ್ಯವಹಾರ ನಡೆಸುವವರಿಗೆ ಸಾಲ ನೀಡಿದ್ದೇವೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಹಿಂದಿರುಗಿಸಿದಾಗ ಮಾತ್ರ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯನ್ನು ಉಳಿಸಿಕೊಳ್ಳಬಹುದು. ಕೊರೋನಾ ಸಂದರ್ಭದಲ್ಲಿ ಸಾಲ ವಸೂಲಾತಿ ಮಾಡಲಿಲ್ಲ. ಕಾನೂನು ಬಿಗಿಯಾಗಿದೆ. ಸೋರಿಕೆಯನ್ನು ಕಡಿಮೆ ಮಾಡಿದ್ದೇವೆ. ಸಾಲಗಾರರಷ್ಟೆ ಜಾಮೀನುದಾರರ ಜವಾಬ್ದಾರಿಯೂ ಜಾಸ್ತಿಯಿದೆ.

2435 ಸದಸ್ಯರುಗಳಿದ್ದು, ಸೊಸೈಟಿ ಲಾಭದಲ್ಲಿದೆಯೇ ವಿನಃ ನಷ್ಟವಂತೂ ಆಗಿಲ್ಲ. ಬಡವ-ಸಿರಿವಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲಾ ಜಾತಿಯವರಿಗೂ ಸದಸ್ಯತ್ವ ನೀಡಿದ್ದೇವೆ. ಅದರಂತೆ ಪ್ರತಿ ವರ್ಷವೂ ಹಿರಿಯರಿಗೆ ಸನ್ಮಾನ ಮಾಡುವುದು ನಮ್ಮ ವಾಡಿಕೆ ಎಂದರು.
ಸದಸ್ಯರುಗಳಿಗೆ ಡೆವಿಡೆಂಟ್ ನೀಡುವ ಬದಲು ಪ್ರತಿ ವರ್ಷವೂ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ನೆನಪಿನ ಕಾಣಿಕೆ ನೀಡಿ ಎಂದು ಕೆಲವರು ಸಲಹೆ ನೀಡಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಡಾ.ರಹಮತ್‍ಉಲ್ಲಾ, ನಿರ್ದೇಶಕರುಗಳಾದ ಸಿ.ಹೆಚ್.ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸಮೂರ್ತಿ, ಬಿ.ಎಂ.ನಾಗರಾಜರಾವ್, ಕೆ.ಚಿಕ್ಕಣ್ಣ, ಸೈಯದ್ ನೂರುಲ್ಲಾ, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಶ್ರೀಮತಿ ಎ.ಚಂಪಕ ಅಶೋಕ್, ಶ್ರೀಮತಿ ಎಂ.ಎಸ್.ರಶ್ಮಿರಮೇಶ್, ನಾಮ ನಿರ್ದೇಶಕ ಎಸ್.ತಿಮ್ಮಪ್ಪ ವೇದಿಕೆಯಲ್ಲಿದ್ದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಮಹ್ಮದ್ ನಯೀಮ್ 2020-21 ನೇ ಸಾಲಿನ ಲೆಕ್ಕಪರಿಶೋಧನೆಯಾಗಿರುವ ಲಾಭ-ನಷ್ಟ ಹಾಗೂ ಆಸ್ತಿ-ಜವಾಬ್ದಾರಿ ತಃಖ್ತೆ ಬಜೆಟ್, ಲಾಭ ವಿಲೇವಾರಿ, ಹೊರಗಿನಿಂದ ತರಬಹುದಾದ ಸಾಲ ಪರಿಮಿತಿ, ಲೆಕ್ಕ ಪರಿಶೋಧಕರ ನೇಮಕ ಹಾಗೂ ಇತರೆ ವಿಷಯಗಳ ಕುರಿತು ವರದಿ ಮಂಡಿಸಿದರು.
ಸೊಸೈಟಿಯ ಸಿಬ್ಬಂದಿಗಳು ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

ಟೀಂ ಇಂಡಿಯಾ ಸೋಲಿನ ಬಗ್ಗೆ ಅಭಿಮಾನಿಗಳು ಮಾತ್ರವಲ್ಲ, ನೆರೆ ದೇಶದ ಆಟಗಾರರಿಗೂ ಬೇಸರ..!

Leave a Reply

Your email address will not be published. Required fields are marked *

error: Content is protected !!