ಸುದ್ದಿಒನ್, ಚಿತ್ರದುರ್ಗ, ಮೇ. 10 : ಜಿಲ್ಲೆಯ ಹಿರಿಯೂರು ನಗರದ ಸುಗ್ಗಿ ಸಂಕೀರ್ಣದಲ್ಲಿರುವ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ಎಕ್ಸ್ ಎಲ್ ಬೈಕ್ ನಲ್ಲಿದ್ದ 5 ಲಕ್ಷ ಹಣವನ್ನು ಕಳ್ಳರು ಕ್ಷಣಾರ್ಧದಲ್ಲೇ ದೋಚಿ ಪರಾರಿಯಾದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಕುಮಾರ್ ಎನ್ನುವವರು ಹಿರಿಯೂರಿನ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ನಲ್ಲಿ ಜಮೀನು ಮಾರಿದ ಹಣವಿಟ್ಟಿದ್ದರು. ಹೊಸಹಳ್ಳಿಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದು ಮನೆ ನಿರ್ಮಾಣದ ಖರ್ಚಿಗೆಂದು ಶನಿವಾರ ನಗರಕ್ಕೆ ಬಂದು 5 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದು ಬೈಕ್ ನ ಹ್ಯಾಂಡಲ್ ಗೆ ದುಡ್ಡಿನ ಕವರ್ ನೇತುಹಾಕಿ ಅಡ್ಡ ನಿಲ್ಲಿಸಿದ್ದ ಬೈಕ್ ಸರಿಸಲು ಹೋಗಿದ್ದಾರೆ. ಅಡ್ಡ ಇದ್ದ ಬೈಕ್ ಸರಿಸಿ ತನ್ನ ಬೈಕ್ ನ ಬಳಿ ಬಂದರೆ ಹಣದ ಕವರ್ ನಾಪತ್ತೆಯಾಗಿತ್ತು. ಯಾರೋ ಇಬ್ಬರು ಕಳ್ಳರು ಕೈ ಸನ್ನೆ ಮಾಡಿ ನನ್ನನ್ನು ಬೈಕ್ ಸರಿಸಲು ಹೇಳಿ ಹಣ ಎಗರಿಸಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















