Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಸಮಸ್ಯೆಗಳ ಕೂಪವಾದ ಟೀಚರ್ಸ್ ಕಾಲೋನಿ; ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ.23 : ಬುದ್ದ ಸರ್ಕಲ್‍ನಿಂದ ಮೇಲ್ಬಾಗದಲ್ಲಿರುವ ಟೀಚರ್ಸ್ ಕಾಲೋನಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಪೊದೆ, ಕುರುಚಲು ಗಿಡಗಳೆ ಹೆಚ್ಚಾಗಿರುವ ಟೀಚರ್ಸ್ ಕಾಲೋನಿಯಲ್ಲಿ ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಬೀದಿ ದೀಪಗಳು ಅಷ್ಟಕಷ್ಟೆ. ಕೆಲವು ಕಡೆ ರಾತ್ರಿ ವೇಳೆ ಕಾರ್ಗತ್ತಲು ಆವರಿಸುತ್ತದೆ. ಕೆಲವೊಮ್ಮೆ ಹಾವುಗಳು ರಸ್ತೆಯಲ್ಲೇ ಮಲಗಿರುತ್ತವೆ. ನಗರಸಭೆ ಕಸದ ವಾಹನ ಎರಡು ಮೂರು ದಿನಕ್ಕೊಮ್ಮೆ ಬರುತ್ತದೆ. ಸಮನಾಗಿಲ್ಲದ ರಸ್ತೆಗಳು ತಗ್ಗು-ದಿಣ್ಣೆಯಿಂದ ಕೂಡಿದೆ. ವಯಸ್ಸಾದವರು ಇಲ್ಲಿ ನಡೆದಾಡುವುದೇ ಕಷ್ಟ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿರುತ್ತವೆ.

ಖಾಲಿ ನಿವೇಶನಗಳಲ್ಲಿ ಕಸದ ರಾಶಿಯೆ ಕಣ್ಣಿಗೆ ರಾಚುತ್ತದೆ. ಬೀದಿ ನಾಯಿ, ಹಂದಿಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ನಿವೃತ್ತ ಶಿಕ್ಷಕರು, ಉಪಾಧ್ಯಾಯರು, ಉಪನ್ಯಾಸಕರು ಅಧ್ಯಾಪಕರುಗಳೆ ಇಲ್ಲಿ ಹೆಚ್ಚು ವಾಸವಾಗಿರುವುದರಿಂದಲೆ ಟೀಚರ್ಸ್ ಕಾಲೋನಿ ಎಂಬ ಹೆಸರಿಡಲಾಗಿದೆ. ಇಲ್ಲಿರುವುದು ಐಷಾರಾಮಿ ಮನೆಗಳೆ. ಆದರೆ ಸಮಸ್ಯೆಗಳ ಆಗರವಾಗಿದೆ. ಹಿರಿಯೂರಿನ ವಾಣಿವಿಲಾಸಸಾಗರ, ಶಾಂತಿಸಾಗರದ ನೀರು ಸರಿಯಾಗಿ ಸರಬರಾಜಿಲ್ಲದ ಕಾರಣ ಇಲ್ಲಿನ ನಿವಾಸಿಗಳು ಬೋರ್‍ವೆಲ್ ನೀರನ್ನೆ ಆಶ್ರಯಿಸಿದ್ದಾರೆ. ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಒಮ್ಮೆ ಇತ್ತ ಕಣ್ಣಾಯಿಸುವುದು ಸೂಕ್ತವೆಂದು ಟೀಚರ್ಸ್ ಕಾಲೋನಿ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಎಲ್.ಸೀತಾರಾಮಯ್ಯ ಮನವಿ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now