Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈತರಿಗೆ ಬಂಪರ್ ಆಫರ್: ಕಡಿಮೆ ಬಡ್ಡಿಯಲ್ಲಿ ಸಿಗಲಿದೆ ಕೃಷಿ ಗೋಲ್ಡ್ ಲೋನ್

---Advertisement---

ಸುದ್ದಿಒನ್,ಮೇ.23:ನೀವೇನಾದರೂ ಬ್ಯಾಂಕ್‌ನಿಂದ ಚಿನ್ನದ ಸಾಲ (ಗೋಲ್ಡ್ ಲೋನ್) ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಸೂಪರ್ ಸುದ್ದಿ ಇದೆ. ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ (BoB) ರೈತರಿಗಾಗಿ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.

ರೈತರ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲು ಬ್ಯಾಂಕ್ ‘ಅಗ್ರಿ ಗೋಲ್ಡ್ ಲೋನ್’ (Agri Gold Loan) ಯೋಜನೆಯನ್ನು ಜಾರಿಗೆ ತಂದಿದೆ.

ರೈತರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಗರಿಷ್ಠ ₹50 ಲಕ್ಷದವರೆಗೆ ಸಾಲ ಪಡೆಯಬಹುದು.ಕೇವಲ 22 ಕ್ಯಾರೆಟ್ ಮಾತ್ರವಲ್ಲದೆ, 18 ಕ್ಯಾರೆಟ್ ಚಿನ್ನವನ್ನು ಅಡವಿಟ್ಟು ಕೂಡ ಈ ಸಾಲದ ಸೌಲಭ್ಯವನ್ನು ಪಡೆಯಬಹುದು.ನೀವು ಅಡವಿಡುವ ಚಿನ್ನದ ಒಟ್ಟು ಮೌಲ್ಯದ ಶೇಕಡಾ 80 ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ.ಆಭರಣಗಳಲ್ಲದೆ, ಚಿನ್ನದ ನಾಣ್ಯಗಳ ಮೇಲೆಯೂ (ಗರಿಷ್ಠ 50 ಗ್ರಾಮ್‌ವರೆಗೆ) ಸಾಲ ಪಡೆಯಬಹುದು.

ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸಾಲ ಪಡೆಯುವಾಗ ಪ್ರೊಸೆಸಿಂಗ್ ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಆದರೆ ಬ್ಯಾಂಕ್ ಆಫ್ ಬರೋಡಾ ರೈತರಿಗೆ ಬಿಗ್ ರಿಲೀಫ್ ನೀಡಿದೆ. ₹3 ಲಕ್ಷದವರೆಗಿನ ಕೃಷಿ ಚಿನ್ನದ ಸಾಲಕ್ಕೆ ಬ್ಯಾಂಕ್ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ. ₹3 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಪ್ರೊಸೆಸಿಂಗ್ ಶುಲ್ಕ ಮತ್ತು ಜಿಎಸ್‌ಟಿ ಅನ್ವಯವಾಗುತ್ತದೆ.

ಸಾಲದ ಅವಧಿ 12 ತಿಂಗಳುಗಳಾಗಿರುತ್ತವೆ. ಆದರೆ ರೈತರು ತಮ್ಮ ಬೆಳೆ ಕೈಗೆ ಬಂದ ತಕ್ಷಣ, ಅವಧಿಗಿಂತ ಮುಂಚಿತವಾಗಿಯೇ ಸಾಲವನ್ನು ಮರುಪಾವತಿಸಬಹುದು. ₹3 ಲಕ್ಷದವರೆಗಿನ ಸಾಲವನ್ನು ಮುಂಚಿತವಾಗಿ ಚುಕ್ತಾ ಮಾಡಿದರೆ ಯಾವುದೇ ಫೋರ್‌ಕ್ಲೋಶರ್ (Forclosure) ಅಥವಾ ಪ್ರಿ-ಪೇಮೆಂಟ್ ದಂಡ ಇರುವುದಿಲ್ಲ.ರೈತರ ಆದಾಯದ ಅವಧಿಗೆ ಅನುಗುಣವಾಗಿ ಅಸಲು ಅಥವಾ ಬಡ್ಡಿಯನ್ನು ಪಾವತಿಸುವ ಸುಲಭ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಸಾಲ ಪಡೆಯಲು ಅರ್ಹತೆಗಳೇನು?

ಭಾರತೀಯ ನಾಗರಿಕರಾಗಿದ್ದು, ಸ್ವಂತ ಚಿನ್ನಾಭರಣಗಳನ್ನು ಹೊಂದಿರುವ ಹಾಗೂ ಕೃಷಿ ಅಥವಾ ಕೃಷಿ ಸಂಬಂಧಿತ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಯಾವುದೇ ರೈತರು ಈ ಕೃಷಿ ಚಿನ್ನದ ಸಾಲವನ್ನು ಪಡೆಯಬಹುದು. ₹3 ಲಕ್ಷದವರೆಗಿನ ಸಾಲಕ್ಕೆ ಒಂದು ವರ್ಷದ MCLR ಬಡ್ಡಿದರವನ್ನು ವಿಧಿಸಲಾಗುತ್ತದೆ, ಇದು ಮಾರುಕಟ್ಟೆಯ ಇತರೆ ಸಾಲಗಳಿಗಿಂತ ಗಣನೀಯವಾಗಿ ಕಡಿಮೆಯಾಗಿರಲಿದೆ.

ಕಡಿಮೆ ಬಡ್ಡಿದರ ಹಾಗೂ ಶೂನ್ಯ ಪ್ರೊಸೆಸಿಂಗ್ ಶುಲ್ಕದಲ್ಲಿ ತುರ್ತು ಹಣದ ಅಗತ್ಯವಿರುವ ರೈತರಿಗೆ ಬ್ಯಾಂಕ್ ಆಫ್ ಬರೋಡಾದ ಈ ಯೋಜನೆ ನಿಜಕ್ಕೂ ಒಂದು ‘ಜಾಕ್‌ಪಾಟ್’ ಎನ್ನಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now