Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ನಾಗರೀಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ನಾಗರೀಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಬನಶಂಕರಿ ಲೇಔಟ್, ಮಲ್ಲಯ್ಯ ಬಡಾವಣೆ ಹಾಗೂ ದಫೆದಾರ್ ನಾರಾಯಣಪ್ಪ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುವೆಂಪು ನಗರದಲ್ಲಿ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಿ ಸುತ್ತಲು ವಿಸ್ತರಿಸಿಕೊಂಡಿರುವ ನಗರಕ್ಕೆ ನೀರು ಪೂರೈಸಬೇಕು. ಬನಶಂಕರಿ ಲೇಔಟ್ ಪಾರ್ಕ್ ಪಕ್ಕದಲ್ಲಿ ರುಡ್‍ಸೆಟ್ ಹತ್ತಿರ ಚರಂಡಿ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶನಿಮಹಾತ್ಮ ದೇವಸ್ಥಾನದ ರಸ್ತೆ ಅಭಿವೃದ್ದಿಯಾಗಬೇಕು. ಇಲ್ಲಿ ಮಕ್ಕಳ ಎರಡು ಹಾಸ್ಟೆಲ್‍ಗಳಿದ್ದು, ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ ಗಂಟೆಗಳಲ್ಲಿ ಹಾವುಗಳಿವೆ. ರಾತ್ರಿ ವೇಳೆ ಜನ ಸಂಚರಿಸಲು ಕಷ್ಟವಾಗಿದೆ. ಬೀದಿ ದೀಪಗಳನ್ನು ಅಳವಡಿಸಬೇಕು. ಚಳ್ಳಕೆರೆ ಗೇಟ್‍ನಿಂದ ಶನಿಮಹಾತ್ಮ ದೇವಸ್ಥಾನದ ರಸ್ತೆತನಕ ಸರ್ವಿಸ್ ರೋಡ್ ಇದ್ದು, ಇಲ್ಲಿ ತಲೆಎತ್ತಿದ್ದ ಗೂಡಂಗಡಿಗಳನ್ನು ಕಳೆದ ತಿಂಗಳು ತೆರವುಗೊಳಿಸಲಾಗಿದೆ. ಆದರೆ ರಸ್ತೆ ಅಭಿವೃದ್ದಿಯಾಗಿಲ್ಲ ಎಂದು ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ಅಧ್ಯಕ್ಷ ಪಿ.ಈ.ವೆಂಕಟಸ್ವಾಮಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಸಮಿತಿಯ ಉಪಾಧ್ಯಕ್ಷ ಎ.ತಿಪ್ಪೇಸ್ವಾಮಿ, ಕಾರ್ಯದರ್ಶಿ ವೈ.ಕೆ.ಮಹಾಸ್ವಾಮಿ, ಖಜಾಂಚಿ ಎ.ಟಿ.ರಮೇಶ್, ನಿರ್ದೇಶಕರುಗಳಾದ ಹೆಚ್.ಕನಕದಾಸ್, ಟಿ.ರುದ್ರಮುನಿ, ಜಿ.ಟಿ.ಲಕ್ಷ್ಮಿನಾರಾಯಣಸ್ವಾಮಿ, ಕೆ.ಹೆಚ್.ತಿಪ್ಪೇಶ್‍ರೆಡ್ಡಿ, ಕೆ.ಟಿ.ತಿಪ್ಪೇಸ್ವಾಮಿ, ಮಾರುತೇಶ್‍ರೆಡ್ಡಿ, ರೂಪ, ಸವಿತಾ ಬೀರಾದಾರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...