Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಸೆವೆನ್ ಹಿಲ್ಸ್ ಡೆವಲಪರ್ಸ್ ವತಿಯಿಂದ ನಿವೇಶನ ನೋಂದಣಿ ಆರಂಭ: ಕಾರು, ಬೈಕ್ ಗೆಲ್ಲುವ ಅವಕಾಶ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 16 : ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವ ಗ್ರಾಹಕರಿಗಾಗಿ ಸೆವೆನ್ ಹಿಲ್ಸ್ ಡೆವಲಪರ್ಸ್ ಸಂಸ್ಥೆಯು ಸಕಲ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡ ನೂತನ ಲೇಔಟ್ ಪರಿಚಯಿಸಿದ್ದು, ನಿವೇಶನಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

‘ಎ’ ಖಾತಾ ಹೊಂದಿರುವ ಈ ಲೇಔಟ್ ನಲ್ಲಿ 30×40 ಅಳತೆಯ ನಿವೇಶನಗಳು ಕೇವಲ ₹14,40,000ಕ್ಕೆ ಲಭ್ಯವಿವೆ. ಗ್ರಾಹಕರ ಅನುಕೂಲಕ್ಕಾಗಿ ಸುಲಭ ಕಂತುಗಳ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಬುಕಿಂಗ್ ಮೊತ್ತವಾಗಿ ₹25,000, 30 ದಿನಗಳ ಒಳಗೆ ₹1,75,000, ನಂತರ ಪ್ರತಿ 3 ತಿಂಗಳಿಗೊಮ್ಮೆ ₹2,00,000 ರಂತೆ 4 ಕಂತುಗಳು ಹಾಗೂ ಅಂತಿಮ ಕಂತಾಗಿ ₹4,40,000 ಪಾವತಿಸಿ ನಿವೇಶನವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಈ ನಿವೇಶನ ಖರೀದಿಸುವ ಗ್ರಾಹಕರಿಗೆ ಮೆಗಾ ಲಕ್ಕಿ ಡ್ರಾ ಮೂಲಕ ಒಂದು ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ 10 ಆಕ್ಟಿವಾ ಬೈಕ್ಗಳನ್ನು ಗೆಲ್ಲುವ ಸುವರ್ಣಾವಕಾಶ ನೀಡಲಾಗುತ್ತಿದೆ. ಎಲ್ಲಾ ನಿವೇಶನಗಳ ಬುಕಿಂಗ್ ಪೂರ್ಣಗೊಂಡ ಬಳಿಕ ಲಕ್ಕಿ ಡ್ರಾ ಎತ್ತಲಾಗಲಿದ್ದು, ವಿಜೇತರಿಗೆ 3ನೇ ಕಂತಿನ ಅವಧಿಯಲ್ಲಿ ವಾಹನಗಳನ್ನು ವಿತರಿಸಲಾಗುವುದು. ಕಾರ್ನರ್ ನಿವೇಶನಗಳಿಗೆ ಶೇ. 20ರಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.

ಲೇಔಟ್ ನ ಸೌಲಭ್ಯಗಳು : 
ಬಡಾವಣೆಯು ಮಕ್ಕಳ ಆಟದ ಮೈದಾನ, ಉದ್ಯಾನವನ, ಸಾಲು ಮರಗಳು, 40 ಅಡಿ ಹಾಗೂ 30 ಅಡಿ ಅಗಲದ ಸಿಮೆಂಟ್ ರಸ್ತೆಗಳು, ಎಸ್ಟಿಪಿ ಒಳಚರಂಡಿ ಮತ್ತು ಪ್ರತಿಯೊಂದು ನಿವೇಶನಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಒಳಗೊಂಡಂತೆ ತಕ್ಷಣವೇ ಮನೆ ನಿರ್ಮಿಸಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ವಾತಾವರಣ ಹೊಂದಿದೆ. ನಿವೇಶನ ಸಂಖ್ಯೆಯನ್ನು ಲಕ್ಕಿ ಡಿಪ್ ಮೂಲಕ ನಿರ್ಧರಿಸಲಾಗುತ್ತದೆ.

ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಹೋಟೆಲ್ ಸಾಯಿ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ  9739571555 ಮೂಲಕ ಸಂಪರ್ಕಿಸಿ ಆಸಕ್ತರು ಹೆಚ್ಚಿನ ವಿವರ ಪಡೆದು ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now