ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ತಾಲ್ಲೂಕಿನ ಭೀಮಸಮುದ್ರ ಗ್ರಾಮದೇವತೆ ಮರುಡಾಂಬಿಕ ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 21 ರಿಂದ 27 ನಡೆಯಲಿದೆ.
ಸೋಮವಾರ ರಾತ್ರಿಯಿಂದ ದೇವಿಗೆ ಅರಿಶಿಣ ಕಾರ್ಯಕ್ರಮ ಮತ್ತದೇಂಗಿತ್ತಿ ಶಾಸ್ತ್ರ ಕಂಕಣ ಧಾರಣೆ.
ಮಂಗಳವಾರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ಸಾರ್ ಭಾಂದಡೆ ಎಡೆ, ಬುಧವಾರ ಸಂಜೆ 5:00ಗೆ ಹೂವಿನ ಪಲ್ಲಕ್ಕಿ
ಗುರುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಹುಚ್ಚಯ್ಯ 4 ಸಂಜೆ ನಾಲಕ್ಕು ಗಂಟೆಗೆ ಬೇವು ಬೇಟೆ ಶುಕ್ರವಾರ ಸಂಜೆ 4.00 ತೇರು, ಶನಿವಾರ ಸಂಜೆ 5.00 ಸಿಡಿ ಉತ್ಸವ ಭಾನುವಾರ 8:00 ಯಿಂದ ಗಾವು ಮುಕ್ತಾಯಗೊಳ್ಳುತ್ತದೆ ಎಂದು ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.










