ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 31 : ದೇಶ ಕಂಡ ಅಪ್ರತಿಮ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಕನ್ನಡ ನಾಡು ನುಡಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆ ಅನನ್ಯ ಎಂದು ಪ್ರಾಂಶುಪಾಲ ಡಾ. ರವಿ ಟಿ ಎಸ್ ಹೇಳಿದರು.
ಅವರು ನಗರದ ಎಸ್ ಆರ್ ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿಸೆಂಬರ್. 30 ರಂದು ನಡೆದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂತರ ಉಪನ್ಯಾಸಕರಾದ ರವಿಕುಮಾರ್ ಮಾತನಾಡುತ್ತ ಕುವೆಂಪುರವರು ಕೇವಲ ಸಾಹಿತಿಗಳಷ್ಟೆ ಅಲ್ಲದೆ ಒಬ್ಬ ಸಮಾಜವಾದಿಯಾಗಿ ಶಿಕ್ಷಣ ತಜ್ಞನಾಗಿ ಹಾಗೂ ಆಧ್ಯಾತ್ಮಿಕ ವ್ಯಕ್ತಿಯಾಗಿಯು ಸಹ ಗುರುತಿಸಿಕೊಂಡಿದ್ದಾರೆ. ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿಯಾದ ವೀರೇಶ ಇ ರವರು ಸಹ ಕುವೆಂಪುರವರ ಜೀವನ ಸಾಧನೆ ಕೃತಿಗಳು ನಾಟಕಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಿಳಿಸಿದರು. ಗಂಗಾಧರ ಡಿ ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಮಿತಾ ಸಿ ಆರ್ ಪ್ರಾರ್ಥಿಸಿದರು. ಅಂಜಲಿ ಸ್ವಾಗತಿಸಿದರು. ದೀಪಾ ಇ ವಂದಿಸಿದರು.
















