ಚಿತ್ರದುರ್ಗ, ಏಪ್ರಿಲ್. 10 : ನಗರದ ಧವಳಗಿರಿ ಬಡಾವಣೆಯ ವಾಸಿ ಕಲ್ಲಮ್ಮನವರು ( 72 ವರ್ಷ) ( ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಂ. ಉಮಾಪತಿಯವರ ಧರ್ಮಪತ್ನಿ) ಇಂದು ಮಧ್ಯಾನ್ಹ 12 : 45 ರ ವೇಳೆಗೆ ಅನಾರೋಗ್ಯದಿಂದ ನಿಧನರಾದರು.
ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಏಪ್ರಿಲ್. 11) ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

















