ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.11 : ಆರ್ಯ ವೈಶ್ಯ ಸಂಘ ಮತ್ತು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದ ವತಿಯಿಂದ ಋಣಾನುಬಂಧ ಆರ್ಯವೈಶ್ಯ ರಾಜ್ಯ ಮಟ್ಟದ ಪ್ರಥಮ ವಧು-ವರರ ಉಚಿತ ಪರಿಚಯ ವೇದಿಕೆ ಜೂ. 16 ರಂದು ಬೆಳಿಗ್ಗೆ 10 ಕ್ಕೆ ವಾಸವಿ ಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆವೋಪ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಡು-ಹೆಣ್ಣನ್ನು ಒಂದು ವೇದಿಕೆಗೆ ತರುವ ಉದ್ದೇಶ ಇದಾಗಿದ್ದು, ಹಣ ಮತ್ತು ಸಮಯ ಎರಡು ಉಳಿತಾಯವಾಗಲಿದೆ. ಮಡಿಕೇರಿ, ಬೀದರ್, ಆಂಧ್ರ, ತಮಿಳುನಾಡಿನಿಂದಲೂ ಅರ್ಜಿಗಳು ಬಂದಿವೆ. ಇದುವರೆವಿಗೂ ಐದುನೂರು ಅರ್ಜಿಗಳು ನಮ್ಮ ಕೈಸೇರಿದ್ದು, ನೊಂದಣಿ ಹಾಗೂ ಗೋತ್ರ ಸೇರಿದಂತೆ ಹನ್ನೆರಡು ಕೌಂಟರ್‍ಗಳನ್ನು ತೆರೆಯಲಾಗಿದೆ.
ಪ್ರತಿ ಹಳ್ಳಿ ಹಳ್ಳಿಗಳಿಂದಲೂ ಉಚಿತ ವಧು-ವರರ ಪರಿಚಯ ವೇದಿಕೆಗೆ ಬೇಡಿಕೆಯಿದ್ದು, ನಮ್ಮ ಜನಾಂಗದಲ್ಲಿ ಕನ್ಯೆಗಳು ಸಿಗುವುದು ಕಷ್ಟವಾಗಿರುವುದರಿಂದ ಋಣಾನುಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಯವೈಶ್ಯ ಜನಾಂಗದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪಿ.ಎಲ್.ಸುರೇಶ್‍ರಾಜು ಮನವಿ ಮಾಡಿದರು.
ಆವೋಪ ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ, ಸಂಚಾಲಕ ಎನ್.ವಿ. ವೆಂಕಟೇಶಮೂರ್ತಿ, ಆವೋಪ ಮಾಜಿ ಅಧ್ಯಕ್ಷ ಮೋಹನ್‍ಕುಮಾರ್, ಜಂಟಿ ಕಾರ್ಯದರ್ಶಿ ಎ.ವಿ.ಸುರೇಶ್‍ಬಾಬು, ನಿರ್ದೇಶಕರುಗಳಾದ ಆರ್.ಸಿ.ನಾಗರಾಜು, ಸುಹಾಸ್, ಸಿ.ಜೆ.ಲಕ್ಷ್ಮಿನರಸಿಂಹಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್