Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಪತ್ರಕರ್ತ ರಂಗನಾಥ್ ಇನ್ನಿಲ್ಲ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 21 : ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮದ ನಿವಾಸಿ ಹಾಗೂ ಬೆಂಗಳೂರಿನಲ್ಲಿ ವಿವಿಧ ಪತ್ರಿಕೆಗಳಿಗೆ ಪುಟ ವಿನ್ಯಾಸಕರಾಗಿದ್ದ ರಂಗನಾಥ್ (46) ಗುರುವಾರ ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆಗೆ ನಿಧನ ಹೊಂದಿದರು.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಓರ್ವ ಪುತ್ರಿ, ಓರ್ವ ಪುತ್ರ, ಪತ್ನಿ ಇದ್ದಾರೆ. ಪಿಣ್ಯದಲ್ಲಿ ಇಂದು (ಮೇ. 21, ಗುರುವಾರ) ಮಧ್ಯಾನ್ಹ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು. ಸ್ನೇಹಿತರು, ಕುಟುಂಬಸ್ಥರು, ಪತ್ರಕರ್ತರು ಅಂತಿಮ ನಮನ ಸಲ್ಲಿಸಿದರು. ವಿಜಯವಾಣಿ, ಕನ್ನಡಪ್ರಭ, ವಿಶ್ವವಾಣಿ ಹೀಗೆ ಅನೇಕ ಪತ್ರಿಕೆಗಳಲ್ಲಿ ವಿಶೇಷ ಪುಟ ವಿನ್ಯಾಸನಾಗಿ ಕಾರ್ಯನಿರ್ವಹಿಸಿದ್ದರು. ವಿಜಯವಾಣಿ ಪತ್ರಿಕೆ ಚಿತ್ರದುರ್ಗ-ದಾವಣಗೆರೆ ಬ್ಯರೋದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಬಳಿಕ ಬೆಂಗಳೂರಿಗೆ ತೆರಳಿ ವಿಶ್ವವಾಣಿ ಪತ್ರಿಕೆಯಲ್ಲಿ ಮುಖಪುಟ, ವಿಶೇಷ ಪುಟಗಳ ವಿನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸುಧೀರ್ಘ 20 ವರ್ಷದ ಸೇವಾವಧಿಯಲ್ಲಿ ಅನೇಕ ಯುವಪೀಳಿಗೆ ಪುಟ ವಿನ್ಯಾಸದ ಕುರಿತು ತರಬೇತಿ ನೀಡಿದ್ದರು. ಜೊತೆಗೆ ಕೆಲಕಾಲ ಪತ್ರಕರ್ತರಾಗಿದ್ದರು. ರಂಗನಾಥ್ ನಿಧಕ್ಕೆ ಪತ್ರಕರ್ತರು, ಸಂಪಾದಕರು, ಸ್ನೇಹಿತ ವರ್ಗದವರು ಕಂಬನಿ ಮಿಡಿದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now