Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಫೆ. 23 ರಂದು ಜೆಡಿಎಸ್ ಪದಾಧಿಕಾರಿಗಳ ಪದಗ್ರಹಣ

---Advertisement---

ಸುದ್ದಿಒನ್, ಚಿತ್ರದುರ್ಗ ಫೆ. 21 : ಜಿಲ್ಲಾ ಜೆಡಿಎಸ್ ಘಟಕಕ್ಕೆ ನೂತನವಾಗಿ ಅಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರು ಆಯ್ಕೆಯಾಗಿದ್ದು ಇವರ ಪದಗ್ರಹಣ ಸಮಾರಂಭವೂ ಫೆ. 23ರ ಸೋಮವಾರ ಬೆಳಿಗ್ಗೆ 11ಕ್ಕೆ ನಗರದ ಜೆಡಿಎಸ್, ಕಚೇರಿಯಲ್ಲಿನ ಹೆಚ್. ಡಿ. ದೇವೇಗೌಡ ಭವನದ ಹಮ್ಮಿಕೊಳ್ಳಲಾಗಿದೆ ಎಂದು  ಚಿತ್ರದುರ್ಗ ಜಿಲ್ಲಾ ಜೆ ಡಿ ಎಸ್ ಘಟಕದ ಜಿಲ್ಲಾ  ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲ ಸ್ವಾಮಿ ನಾಯಕ ತಿಳಿಸಿದ್ದಾರೆ.

ಜಿಲ್ಲಾ ಜೆಡಿಎಸ್ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ  ಮತ್ತು  ಚಿತ್ರದುರ್ಗ  ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಣ್ಣ ತಿಮ್ಮಪ್ಪ  ನೇಮಕವಾಗಿದ್ದಾರೆ. ಫೆ. 23ರ ರ ಸೋಮುವಾರ  ಬೆಳಗ್ಗೆ 11 ಗಂಟೆಗೆ  ಪದಗ್ರಹಣ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ  ಪ್ರಧಾನ ಕಾರ್ಯದರ್ಶಿ ಬಿ ಕಾಂತರಾಜ್, ಜಿಲ್ಲಾ ಜೆ ಡಿಎಸ್‍ಘಟಕದ  ಮಾಜಿ ಅಧ್ಯಕ್ಷರಾದ ಡಿ ಯಶೋಧರ್, ಎಂ ಜಯಣ್ಣ,  ಜಿಲ್ಲಾ ಜೆಡಿಎಸ್  ಕಾರ್ಯಧ್ಯಕ್ಷ ರಾದ  ಜಿಬಿ ಶೇಖರ್, ಮಠದ ಹಟ್ಟಿವೀರಣ್ಣ  ನಗರಸಭೆಯ ಮಾಜಿ ಸದಸ್ಯರಾದ ಚಂದ್ರಶೇಖರ್, ನಸುರುಲ್ಲಾ,  ದೀಪಕ್,  ತಿಪ್ಪೇಸ್ವಾಮಿ,  ಪ್ರತಾಪ್‍ಜೋಗಿ, ಅಬ್ಬು ಲಲಿತಾ ಕೃಷ್ಣಮೂರ್ತಿ ಗೀತಮ್ಮ  ನಿಜಲಿಂಗಪ್ಪ,  ಲಿಂಗ ರಾಜು, ಮಂಜುನಾಥ  ಜಾಲಿಕಟ್ಟೆ ರುದ್ರಣ್ಣ ಚಿದಾನಂದ  ಮತ್ತು ಜಿಲ್ಲೆಯ  ನೂತನ  ತಾಲ್ಲೂಕು  ಘಟಕದ  ಅಧ್ಯಕ್ಷರು  ಮತ್ತು  ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ  ರವೀಶ್, ವೀರಭದ್ರಪ್ಪ, ಶಿವಶಂಕರ  ಯಾದವ್  ಶಿವಪ್ರಸಾದ್ ಗೌಡ ಮತ್ತು ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...