Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಬಯಲುಸೀಮೆ, ಇದನ್ನು ಮಲೆನಾಡು ಮಾಡೋಣ : ಗೋಪ್ಯಾ ನಾಯ್ಕ ಕರೆ  

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 05 : “ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಅದರ ಬೆಳವಣಿಗೆಗೆ ಕಾಳಜಿ ವಹಿಸಬೇಕು” ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿದ್ದು ಪರಿಸರ ಸಂರಕ್ಷಣಾ ಕಾರ್ಯ ಅಗತ್ಯ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ ಹೇಳಿದರು.

ಚಿತ್ರದುರ್ಗ ನಗರದಲ್ಲಿ ಶತಮಾನೋತ್ಸವ ತುಂಬಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಳಗೋಟೆ ಬಾರ್ ಲೈನ್ ಸ್ಕೂಲ್ ನಲ್ಲಿ    ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಏಳುಸುತ್ತಿನ ಕೋಟೆ ಪ್ರೊಡಕ್ಷನ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಮಾತೃಭೂಮಿ ಎಂಟರ್ಪ್ರೈಸಸ್ & ಸರ್ವಿಸ್, ಆಶ್ರಯದಲ್ಲಿ ಪರಿಸರ ದಿನಾಚರಣೆ ಮತ್ತು ಸಸಿ ವಿತರಣೆ,  ಸರ್ಕಾರಿ ಶಾಲೆಯ ಮಹತ್ವದ ಬಗ್ಗೆ ಸಾರುವ ” ಅಪ್ರತಿಮ” ಮಕ್ಕಳ ಚಿತ್ರ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ‌ಮಾತನಾಡಿ, ಚಿತ್ರದುರ್ಗ ಬಯಲುಸೀಮೆ ಇದನ್ನು ಮಲೆನಾಡಿನಂತೆ ಮಾಡಲು ಎಲ್ಲಾ ಜನರು ಪರಿಸರ ಅಭಿವೃದ್ಧಿಯಲ್ಲಿ ಪಾಲ್ಲೊಳ್ಳಿ ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಮಾತನಾಡಿ. “ಸರ್ಕಾರಿ ಶಾಲೆಗಳು ಸಮಾಜದ ಅಭಿವೃದ್ಧಿಯ ಕೇಂದ್ರಗಳಾಗಿವೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಇಂತಹ ಕಾರ್ಯಕ್ರಮಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ” ಸಾಧಕರೆಲ್ಲರೂ ಸರ್ಕಾರಿ ಶಾಲೆ ಮಕ್ಕಳು ಎಂದು ತಿಳಿಸಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಡಿಸಿಸಿ ಅಧ್ಯಕ್ಷರಾದ ಎಂ.ಕೆ. ತಾಜ್ ಪೀರ್ ಮಾತನಾಡಿ
“ಶಿಕ್ಷಣದ ಜೊತೆಗೆ ಪರಿಸರ ಜಾಗೃತಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕು. ಸರ್ಕಾರಿ ಶಾಲೆಗಳ ಕುರಿತ  ಅಪ್ರತಿಮ ಎಂಬ ಮಕ್ಕಳ ಚಿತ್ರ ರಾಜ್ಯ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದು ಮಾತನಾಡಿದರು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರೂ, ವಕೀಲರಾದ ಮಾಲತೇಶ್ ಅರಸ್,  ಮಾತನಾಡಿ
“ಪರಿಸರ ಸಂರಕ್ಷಣೆ , ಶಾಲಾಭಿವೃದ್ದಿ,ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ವಿದ್ಯಾರ್ಥಿಗಳು ಸಸಿ ನೆಡುವುದರ ಜೊತೆಗೆ ಅವುಗಳನ್ನು ಪೋಷಿಸುವ ಸಂಕಲ್ಪ ಮಾಡಬೇಕು. ಪ್ರಕೃತಿ ಉಳಿದರೆ ಮಾತ್ರ ಮಾನವ ಬದುಕು ಸುರಕ್ಷಿತ. ನಾವು ಈ ಶಾಲೆಯನ್ನು ದತ್ತು ಪಡೆದಿದ್ದು ಹೊಸತನದ ಅಭಿವೃದ್ಧಿ ಗೆ ಕೈ ಹಾಕಿದ್ದೇವೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ. ಸರ್ದಾರ್ ಮಾತನಾಡಿ, “ಪರಿಸರ ರಕ್ಷಣೆಗಾಗಿ ಯುವಜನರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಪಾತ್ರವಹಿಸಬೇಕು. ಸಮಾಜದಲ್ಲಿ ಹಸಿರು ಕ್ರಾಂತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು. ಶಾಲೆಯ ಅಭಿವೃದ್ಧಿ ಗೆ ಪೂರಕವಾಗಿ ಸಜಕರಿಸಲಾಗುವುದು ಎಂದರು.

ತಾಲ್ಲೂಕು ಕೆಡಿಪಿ ಸದಸ್ಯ ನಾಗರಾಜ್ ಮಾತನಾಡಿ…
“ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಸಸಿ ನೆಡುವ ಅಭಿಯಾನವನ್ನು ಜನಾಂದೋಲನವಾಗಿಸಬೇಕು” ಶಾಲೆಯ ಅಭಿವೃದ್ದಿಗೆಚೇಎಂದು ತಿಳಿಸಿದರು.

ಚಿತ್ರದುರ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರಿಜಾ ಮಾತನಾಡಿ. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ, ಸಾಮಾಜಿಕ ಜವಾಬ್ದಾರಿ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಸ.ಹಿ.ಪ್ರಾ. ಶಾಲೆ ಕೆಳಗೋಟೆ ಮುಖ್ಯೋಪಾಧ್ಯಾಯರಾದ ಡಿ.ಟಿ. ಓಬಣ್ಣ, ಮಾತನಾಡಿದರು.

“ಸರ್ಕಾರಿ ಶಾಲೆಗಳ ಮಹತ್ವ ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ‘ಅಪ್ರತಿಮ’ ಮಕ್ಕಳ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರವು ಶಿಕ್ಷಣ ಮತ್ತು ಸಾಮಾಜಿಕ ಮೌಲ್ಯಗಳನ್ನು ಸಾರಲಿದೆ” ಎಂದು ನಿರ್ದೇಶಕ ದೇವರತ್ನ ಮಂಜುನಾಥ್   ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಾವಿದ ಬಸವರಾಜ್ (ಕೋಕನಟ್), ವಸೀಂ, ವಿಜಯ್, ನವೀನ್, ಪೆನ್ನಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಿಂದ ಗೀತ ಗಾಯನ ಮತ್ತು ಭರತನಾಟ್ಯ ನಡೆಯಿತು.  ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now