Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಮಳೆಗೆ ಕುಸಿದು ಬಿದ್ದ ಮನೆ : 7 ಮೇಕೆಗಳು ಸಾವು : ಮನೆ ಮಂದಿ ಅದೃಷ್ಟವಶಾತ್ ಪಾರು

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ.27 : ತಾಲ್ಲೂಕಿನ ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಜಯಪ್ಪ ಎನ್ನುವವರ ಮನೆ ಕುಸಿದಿದ್ದು 7 ಮೇಕೆಗಳು ಮೃತಪಟ್ಟಿವೆ. ಅದೇ ಮನೆಯಲ್ಲಿ ಗಂಡ ಹೆಂಡತಿ ಮಗ ಹಾಗೂ ಮೊಮ್ಮಗ ಮಲಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗ ತಹಶೀಲ್ದಾರ್  ನಾಗವೇಣಿ ಮಾತನಾಡಿ,  ಜಿಲ್ಲೆಯಲ್ಲಿ ಒಂದು ವಾರದಿಂದ ಬಹುತೇಕ ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿ ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯಲ್ಲಿ ಜಯಪ್ಪ ಎಂಬುವರ ಮನೆ ಕುಸಿದಿದ್ದು ಸದ್ಯ ಯಾರಿಗೂ ಜೀವ  ಹಾನಿಯಾಗಿಲ್ಲ.  4 ಜನರು ಪ್ರಾಣಾಪಾಯದಿಂದ ಪರಾಗಿದ್ದಾರೆ. ಸುಮಾರು 70,000 ರೂಪಾಯಿ ಬೆಲೆಬಾಳುವ ಮೇಕೆಗಳು ಮಣ್ಣಿನ ಗೋಡೆ ಬಿದ್ದು ಮೃತಪಟ್ಟಿವೆ.  ಇದಕ್ಕೆ ಪಶುವೈದ್ಯರಿಗೆ ಅಧಿಕಾರಿಗಳ ತಿಳಿಸಿದ್ದೇವೆ ಹಾಗೆಯೇ ಗ್ರಾಮದ  ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಒಂದು ವಾರದ ಒಳಗಾಗಿ ಸರ್ಕಾರದಿಂದ ಬರುವ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಶಾಸಕರಾದ ಕೆ.ಸಿ. ವೀರೇಂದ್ರ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು

ಭೀಮಸಮುದ್ರ ಪಶು ವೈದ್ಯಾಧಿಕಾರಿ ಸತೀಶ್ ಭೇಟಿ ನೀಡಿ  7 ಮೇಕೆ ಮೃತಪಟ್ಟಿದ್ದು ಮನೆ ಕುಸಿದು ಬಿದ್ದು ಮಣ್ಣಿನಲ್ಲಿಯೇ ಮುಚ್ಚಿ ಹೋಗಿವೆ. ಸರ್ಕಾರದಿಂದ ಬರುವ ಪರಿಹಾರ ಬರುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಆಡಳಿತ ಅಧಿಕಾರಿಯಾದ ಸದಾನಂದ ಹಾಗೂ ಪಶು ವೈದ್ಯರಾದ ಸತೀಶ್ ಗ್ರಾಮ ಪಂಚಾಯಿತಿಯ ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...