ಚಿತ್ರದುರ್ಗ ಏ. 21 : ನಗರದ ಸರಸ್ವತಿ ವಿದ್ಯಾಸಂಸ್ಥೆ (ರಿ), ಸರಸ್ವತಿ ಕಾನೂನು ಮಹಾವಿದ್ಯಾಲಯ, ಚಿತ್ರದುರ್ಗ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಗಳು ಏ. 22 ಮತ್ತು 23 ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣ ಹಮ್ಮಿಕೊಳ್ಳಲಾಗಿದೆ ಎಂದು ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಡಾ.ಎಂ.ಎಸ್. ಸುಧಾದೇವಿ ತಿಳಿಸಿದ್ದಾರೆ.
ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಗಳ ಬಗ್ಗೆ ಮಾಹಿತಿ ನೀಡಿದ ಅವರು ಈ ಪಂದ್ಯಾವಳಿಗಳಲ್ಲಿ ರಾಜ್ಯದ ವಿವಿಧ ಕಾನೂನು ಕಾಲೇಜುಗಳಿಂದ ಸುಮಾರು 35 ತಂಡಗಳ ಕ್ರೀಡಾಪಟುಗಳು ಸೇರಿದಂತೆ 400 ಜನ ಅಗಮಿಸಲಿದ್ದಾರೆ, ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಈ ಪಂದ್ಯಾವಳಿಗಳು ಅಲ್ಲದೆ ನಮ್ಮ ಕಾಲೇಜು ಹÀಲವಾರು ವರ್ಷಗಳಿಂದ ಚೆಸ್, ಪುಟ್‍ಬಾಲ್, ಕುಸ್ತಿ, ವೆಟ್ ಲಿಫ್ಟಿಂಗ್, ಗುಡ್ಡಗಾಡು ಓಟದ ಸ್ಪರ್ಧೆ ಸೇರಿದಂತೆ 10ಕ್ಕೂ ಹೆಚ್ಚು ಬಾರಿ ಕಬ್ಬಡಿ ಪಂದ್ಯಾವಳಿಯನ್ನು ನಡೆಸಲಾಗಿದೆ ಇದರೊಂದಿಗೆ ಬಾಲP,À ಬಾಲಕಿಯರ ವಾಲಿಬಾಲ್, ಪಂದ್ಯಾವಳಿಯನ್ನು ಸಹಾ ನಡೆಸಲಾಗಿದೆ ಎಂದಿದ್ದಾರೆ.

ಏ. 22ರ ಬುಧವಾರ ಬೆಳಿಗ್ಗೆ 10 ಗಂಟೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ರಾಜ್ಯಸಭಾ ಮಾಜಿ ಸದಸ್ಯರು, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ವಹಿಸಲಿದ್ದಾರೆ. ಪಂದ್ಯಾವಳಿಗಳನ್ನು ಧ್ಯಾನ್ ಚಂದ್ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರರಾದ ಬಿ.ಸಿ.ಸುರೇಶ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಸಂಸ್ಥೆ(ರಿ)ಯ ಉಪಾಧ್ಯಕ್ಷರು, ಹಿರಿಯ ವಕೀಲರಾದ ಫಾತ್ಯರಾಜನ್, ಕಾರ್ಯದರ್ಶಿಗಳು ಹಿರಿಯ ವಕೀಲರಾದ ಶ್ರೀಮತಿ ಡಿ.ಕೆ. ಶೀಲಾ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಖಾಲಿದ್ ಖಾನ್ ಭಾಗವಹಿಸಲಿದ್ದಾರೆ.
ಸಮಾರೋಪ & ಬಹುಮಾನ ವಿತರಣೆ :
ಏ. 23ರ ಗುರುವಾರ ಸಂಜೆ 5ಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿ ಸÀಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ಬಹುಮಾನ ವಿತರಣೆಯನ್ನು ರಾಜ್ಯ ಸಭಾ ಮಾಜಿ ಸದಸ್ಯರು, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಸಂಸ್ಥೆ(ರಿ)ಯ ಉಪಾಧ್ಯಕ್ಷರು, ಹಿರಿಯ ವಕೀಲರಾದ ಫಾತ್ಯರಾಜನ್, ಕಾರ್ಯದರ್ಶಿಗಳು ಹಿರಿಯ ವಕೀಲರಾದ ಶ್ರೀಮತಿ ಡಿ.ಕೆ. ಶೀಲಾ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಖಾಲಿದ್ ಖಾನ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಡಾ.ಎಂ.ಎಸ್. ಸುಧಾದೇವಿ ವಹಿಸಲಿದ್ದಾರೆ.

















