Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಇತಿಹಾಸ ಕೂಟ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದೆ : ಡಾ.ಶರಣಬಸಪ್ಪ ಕೋಲ್ಕಾರ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮೇ.28) : ಕಿಷ್ಕಿಂದೆ ಒಂದು ಪೌರಾಣಿಕ ಸ್ಥಳ ಎನ್ನುವುದು ರಾಮಾಯಣ, ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಉತ್ತರ ಭಾರತದಲ್ಲಿ ಕಿಷ್ಕಿಂದೆಯಿದೆ ಎಂದು ಹೇಳಲು ಅನೇಕ ಸವಾಲುಗಳಿವೆ ಎಂದು ಗಂಗಾವತಿಯ ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶರಣಬಸಪ್ಪ ಕೋಲ್ಕಾರ ತಿಳಿಸಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕøತಿ -ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 49 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿಷಿಂಧೆ ಅಸ್ಮಿತೆಯ ಸವಾಲುಗಳು ಎನ್ನುವ ವಿಚಾರ ಕುರಿತು ಮಾತನಾಡಿದರು.

ವಾನರ ಸಮುದಾಯ ಕಿಷ್ಕಿಂಧೆಯಲ್ಲಿತ್ತು. ಹನುಮಂತ, ಸುಗ್ರೀವ, ವಾಲಿ ಇದ್ದ ಸ್ಥಳ ಎಂದು ಹೇಳಲಾಗುತ್ತಿದೆ. ರಾಮಾಯಣ, ಮಹಾಭಾರತ ಸತ್ಯವೋ ಕಾಲ್ಪನಿಕವೋ ಎನ್ನುವ ಚರ್ಚೆಗಳು ನಡೆಯುತ್ತಿದೆ. ಕರ್ನಾಟಕದ ಹಂಪಿಯ ಆನೆಗುಂದಿ ಪ್ರದೇಶವೇ ಕಿಷ್ಕಿಂಧೆ ಎನ್ನುವ ನಂಬಿಕೆಯೂ ಇದೆ. ಸಾಮಾಜಿಕ, ಧಾರ್ಮಿಕ ಆಚರಣೆಗೆ ಜನಪದ ಕಥನಗಳಿವೆ. ವಾಲ್ಮೀಕಿ ಋಷಿಯ ಕಾವ್ಯದಲ್ಲಿ ಕಿಷ್ಕಿಂಧೆ ಉಲ್ಲೇಖವಾಗಿದೆ.
ರಾಮಾಯಣದ ಅನೇಕ ಕಥನಗಳಲ್ಲಿ ಕೆಲವು ಸ್ಥಳಗಳು ಬೆರೆತುಕೊಂಡಿವೆ ಎಂದು ಹೇಳಿದರು.

ಕರ್ನಾಟಕದ ಹನುಮನ ನಾಡಿನಲ್ಲಿ ಕಿಷ್ಕಿಂಧೆಯಿದೆ ಎನ್ನುವ ನಂಬಿಕೆಯೂ ಇದೆ. ಇದಕ್ಕೆ ಕರ್ನಾಟಕದ ಅನೇಕ ಪ್ರಾಚೀನ ಸಾಹಿತ್ಯಗಳಲ್ಲಿ ಉಲ್ಲೇಖವಾಗಿರುವುದು ಸಾಕ್ಷಿ. ಪೂರ್ವಜರ ಚರಿತ್ರೆ ಪರಂಪರೆಯನ್ನು ಹೊರತುಪಡಿಸಿ ವೈಜ್ಞಾನಿಕ ಬದುಕು ಕಟ್ಟಿಕೊಳ್ಳಲು ಹೋದರೆ ಆತಂಕಕ್ಕೊಳಗಾಗಬೇಕಾಗುತ್ತದೆ. ಇತಿಹಾಸ, ಸಂಸ್ಕøತಿ, ಸಂಶೋಧನೆಗಳ ಮೂಲಕ ಚಿತ್ರದುರ್ಗ ಇತಿಹಾಸ ಕೂಟ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಶ್ಲಾಘಿಸಿದರು.

ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಾಗುತ್ತಿರುವಂತೆ ಮನುಷ್ಯನ ಜೀವನದಲ್ಲಿ ಸತ್ವ, ಸಾರ, ಸಂತಸ ಕಳೆದು ಹೋಗುತ್ತಿದೆ. ಇದರಿಂದ ಬದುಕು ಸಂಕಿರಣಗೊಳ್ಳುತ್ತಿದೆ. ಪೂರ್ವಜರಿಗಿಂತ ಸರಳವಾದ ಸೌಲಭ್ಯಯುತ ಜೀವನ ನಡೆಸುತ್ತಿರುವುದರಿಂದ ಮೌಲ್ಯಗಳು ಕಳೆದು ಹೋಗಿ ಸಂಬಂಧಗಳು ಸಡಿಲಗೊಳ್ಳುತ್ತಿದ್ದು, ಆತಂಕ ಎದುರಾಗುತ್ತಿದೆ ಎಂದು ನುಡಿದರು.

ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ವೈಜ್ಞಾನಿಕ ಆವಿಷ್ಕಾರವನ್ನು ಬೆನ್ನತ್ತಿ ಹೋಗುತ್ತಿರುವುದರಿಂದ ಸಂತಸ ಕಳೆದುಕೊಂಡು ಪರಸ್ಪರ ಸಂಬಂಧ, ಕೌಟುಂಬಿಕ ಮೌಲ್ಯಗಳು ನಶಿಸುತ್ತಿವೆ. ಹಾಗಾಗಿ ಆತಂಕದ ದಿನಗಳನ್ನು ಎದುರು ನೋಡುವಂತಾಗಿದೆ. ಸಂಸ್ಕøತಿ ಪರಂಪರೆ ಕಡೆ ಮುಖ ಮಾಡಬೇಕಾಗಿದೆ.

ಐತಿಹಾಸಿಕ ಚಿತ್ರದುರ್ಗ ನಾಡು ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವ, ರಾಜಾವೀರ ಮದಕರಿನಾಯಕನ ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾದುದು. ಇತಿಹಾಸ, ಪರಂಪರೆ, ಸಂಸ್ಕøತಿಯನ್ನು ಶ್ರೀಮಂತಗೊಳಿಸುವಲ್ಲಿ ದೊಡ್ಡ ದೊಡ್ಡ ಇತಿಹಾಸಕಾರರು, ಸಂಶೋಧಕರು ಕೆಲಸ ಮಾಡುತ್ತಿದ್ದಾರೆಂದು ಡಾ.ಬಿ.ಎಲ್.ವೇಣು, ಲಕ್ಷ್ಮಣತೆಲಗಾವಿ, ಡಾ.ಬಿ.ರಾಜಶೇಖರಪ್ಪ, ಶ್ರೀಶೈಲ ಆರಾಧ್ಯ ಇವರುಗಳನ್ನು ನೆನಪಿಸಿಕೊಂಡರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ವೈ.ಬಿ.ನಟರಾಜ್, ಉಪನ್ಯಾಸಕ ಡಾ.ಓ.ದೇವರಾಜ್, ಸಾಹಿತಿ ಬಿ.ಎಲ್.ವೇಣು, ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಲಕ್ಷ್ಮಣ್ ತೆಲಗಾವಿ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಕೆ.ನಾಗರಾಜ್, ಮೃತ್ಯುಂಜಯಪ್ಪ, ಪ್ರೊ.ಹೆಚ್.ಲಿಂಗಪ್ಪ, ಸುರೇಶ್‍ಗುಪ್ತ, ಜಿ.ಎಸ್.ಉಜ್ಜಿನಪ್ಪ, ರಾಜಮದಕರಿನಾಯಕ, ನಾಗಭೂಷಣ್, ವೆಂಕಟೇಶ್, ರುದ್ರಮೂರ್ತಿ, ಡಾ.ತಿಪ್ಪೇಸ್ವಾಮಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಇತಿಹಾಸಕ್ತರು ಉಪನ್ಯಾಸ ಕಾರ್ಯಕ್ರಮದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿಂದಿಸಿದ ಕಿಡಿಗೇಡಿಗಳು ಈಗ ಗಪ್ ಚಿಪ್..!

ಆರ್ಸಿಬಿ ಆಟಗಾರರು ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುತ್ತಾ ಬಂದಿತ್ತು. ಇದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಈ ಸೋಲು-ನೋವಿನ ನಡುವೆ ಯಾರೋ ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಕೆಟ್ಟ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಾಹಿತಿ…!

  ಚಿತ್ರದುರ್ಗ. ಮೇ.19 : ಜಿಲ್ಲೆಯಾದ್ಯಂತ ಕೃತಿಕಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ -1ರಲ್ಲಿ 24.0, ಮಿ.ಮೀ ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

error: Content is protected !!