ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 09 : ನಗರದಲ್ಲಿ ನ.11 ರಂದು ನಡೆಯಲಿರುವ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ವಿಜೃಂಭಣೆಯಿಂದ ಆಚರಿಸುವ ಕುರಿತು ಛಲವಾದಿ ಮಹಾಸಭಾದಿಂದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಛಲವಾದಿ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ ಕೆಚ್ಚೆದೆಯ ಧೀರ ಮಹಿಳೆ ಒನಕೆ ಓಬವ್ವ ಶತ್ರುಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ನಮ್ಮ ಸಮಾಜದ ಮುಖಂಡರುಗಳು ಹಳ್ಳಿಗಳಲ್ಲಿ ಸುತ್ತಾಡಿ ಛಲವಾದಿ ಸಮಾಜದವರಲ್ಲಿ ಒನಕೆ ಓಬವ್ವಳ ಕುರಿತು ಜಾಗೃತಿ ಮೂಡಿಸಿ ಕೋಟೆ ಮುಂಭಾಗದಿಂದ ಹೊರಡುವ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಮ್ಮ ಸಮಾಜದವರು ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.
ಒನಕೆ ಓಬವ್ವ ಜಯಂತಿಯಂದು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಒದಗಿಸಬೇಕಾಗಿರುವುದರಿಂದ ಎಲ್ಲರ ಸಹಕಾರ ಮುಖ್ಯ. ಮುಂದಿನ ವರ್ಷದಿಂದ ಒಬವ್ವಳ ಜಯಂತಿಯನ್ನು ವೈಭವೋಪೇತವಾಗಿ ಆಚರಿಸೋಣ ಎಂದು ಛಲವಾದಿ ಸಮಾಜದವರಿಗೆ ಕರೆ ನೀಡಿದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಶೇಷಪ್ಪ, ಪ್ರೊ.ರಂಗಸ್ವಾಮಿ, ಭಾರ್ಗವಿ ದ್ರಾವಿಡ್, ಎಸ್.ವಿ.ಗುರುಮೂರ್ತಿ, ದಯಾನಂದ್, ಎಸ್.ಎನ್.ರವಿಕುಮಾರ್ ಕೆ.ಜಯರಾಮ್, ದೀಪಕ್, ಧರ್ಮಕಾಳೆ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಪ್ರೊ.ನಟರಾಜ್, ಶಿವಪ್ರಸಾದ್, ನವೀನ್ ದ್ರಾವಿಡ್, ರಾಮಲಿಂಗಪ್ಪ, ಪರಮೇಶ್ ಪೂಜಾರ್
ಆರ್.ಪ್ರದೀಪ್ಕುಮಾರ್, ನಾಗರಾಜ್ ಪೈಲೆಟ್, ನವೀನ್ ಮಸ್ಕಲ್, ಶಿವಸ್ವಾಮಿ ಇವರುಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.











