Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಎಂ ರಾಹತ್ ಯೋಜನೆ : ರಸ್ತೆ ಅಪಘಾತಕ್ಕೊಳಗಾದವರಿಗೆ ಇನ್ಮುಂದೆ ಉಚಿತ ಚಿಕಿತ್ಸೆ; ಇಲ್ಲಿದೆ ಸಂಪೂರ್ಣ ವಿವರ

PM Rahat Scheme: Free treatment for road accident victims from now on; here are the full details
---Advertisement---

ನವದೆಹಲಿ: ರಸ್ತೆ ಅಪಘಾತ ಸಂಭವಿಸಿದ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಲು ಹಣವಿಲ್ಲ ಎಂಬ ಆತಂಕಕ್ಕೆ ಈಗ ತೆರೆಬಿದ್ದಿದೆ. ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ದೇಶಾದ್ಯಂತ ಉಚಿತ ಮತ್ತು ನಗದುರಹಿತ ತುರ್ತು ಚಿಕಿತ್ಸೆ ಒದಗಿಸುವ ಮಹತ್ವದ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ‘ಪಿಎಂ ರಾಹತ್’ಯೋಜನೆಯನ್ನು ಜಾರಿಗೆ ತಂದಿದೆ.

ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆ ದಾಖಲಾತಿ ಮತ್ತು ಖಾತರಿಪಡಿಸಿದ ಚಿಕಿತ್ಸೆ (Road Accident Victims’ Hospitalisation & Assured Treatment – PM RAHAT) ಎಂಬ ಹೆಸರಿನ ಈ ರಾಷ್ಟ್ರೀಯ ಯೋಜನೆಯಡಿ, ಗಾಯಾಳುಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಗರಿಷ್ಠ 7 ದಿನಗಳವರೆಗೆ ಅಥವಾ ₹1.5 ಲಕ್ಷ ಮೌಲ್ಯದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ.

ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ತಗ್ಗಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ವೈದ್ಯಕೀಯ ನೆರವು ಸಕಾಲಕ್ಕೆ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಹಣದ ಕೊರತೆಯಿಂದಾಗಿ ಯಾವುದೇ ವ್ಯಕ್ತಿ ಅಥವಾ ಅವರ ಕುಟುಂಬಸ್ಥರು ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ಜೀವ ಕಳೆದುಕೊಳ್ಳಬಾರದು ಎಂಬ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಯೋಜನೆಯ ಪ್ರಮುಖ ಸೌಲಭ್ಯಗಳು

ನಗದುರಹಿತ ಚಿಕಿತ್ಸೆ: ಅಪಘಾತಕ್ಕೊಳಗಾದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವಾಗ ಯಾವುದೇ ಮುಂಗಡ ಹಣ (Advance Payment) ಪಾವತಿಸುವ ಅಗತ್ಯವಿಲ್ಲ.

ಆರ್ಥಿಕ ಮಿತಿ: ಅಪಘಾತ ಸಂಭವಿಸಿದ ದಿನದಿಂದ ಗರಿಷ್ಠ 7 ದಿನಗಳವರೆಗೆ ಅಥವಾ ₹1.5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ.

ವ್ಯಾಪ್ತಿ: ಯೋಜನೆಯಡಿ ಗುರುತಿಸಲಾದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಿರುತ್ತದೆ.

ಅಪಘಾತ ಸಂಭವಿಸಿದಾಗ ತಕ್ಷಣವೇ ಏನು ಮಾಡಬೇಕು?

ಅಪಘಾತ ನಡೆದ ತಕ್ಷಣದ ‘ಗೋಲ್ಡನ್ ಅವರ್’ (Golden Hour) ಜೀವ ಉಳಿಸಲು ಅತ್ಯಂತ ನಿರ್ಣಾಯಕ ಸಮಯ. ಈ ಯೋಜನೆಯ ಪ್ರಯೋಜನ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಅಪಘಾತ ಸಂಭವಿಸಿದ ತಕ್ಷಣ ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ.

ಕರೆ ಬಂದ ತಕ್ಷಣ ತುರ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಹತ್ತಿರದ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸುತ್ತದೆ.

ಆಸ್ಪತ್ರೆಯ ಆಡಳಿತ ಮಂಡಳಿಯು ಯಾವುದೇ ಮುಂಗಡ ಹಣಕ್ಕೆ ಪೀಡಿಸದೆ ತಕ್ಷಣವೇ ತುರ್ತು ಚಿಕಿತ್ಸೆಯನ್ನು ಪ್ರಾರಂಭಿಸುತ್ತದೆ.

ಹಿಂದೆ ಪೊಲೀಸ್ ಅಥವಾ ಆಸ್ಪತ್ರೆಯ ವಿಚಾರಣೆಗಳ ಭೀತಿ ಹಾಗೂ ಹಣಕಾಸಿನ ಹೊರೆಯ ಭಯದಿಂದಾಗಿ ಹಲವರು ಗಾಯಾಳುಗಳಿಗೆ ನೆರವಾಗಲು ಹಿಂಜರಿಯುತ್ತಿದ್ದರು. ಆದರೆ ಈ ಯೋಜನೆಯು ಹಣಕಾಸಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದು, ಸಕಾಲದಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ.

Join WhatsApp

Join Now

Join Telegram

Join Now