Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಮೇ 25 ರಿಂದ ಜೂನ್ 30 ರವರೆಗೆ ಸುಶ್ರುತ ಆಸ್ಪತ್ರೆಯಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ.20: ನಗರದ ತರುವನೂರು ರಸ್ತೆಯ ರೇವತಿ ಲಾಡ್ಜ್ ಹತ್ತಿರ ಹಾಗೂ ಕೀರ್ತ್ ಡಯಾಗ್ನೋಸ್ಟಿಕ್ ಪಕ್ಕದಲ್ಲಿರುವ ‘ಸುಶ್ರುತ ಆಯುರ್ವೇದ ಆಸ್ಪತ್ರೆ’ಯಲ್ಲಿ ಸುದೀರ್ಘ ಅವಧಿಯ ವಿಶೇಷ ಆಯುರ್ವೇದ ತಪಾಸಣಾ ಶಿಬಿರವು ನಡೆಯುತ್ತಿದೆ. 25-05-2025 ರಿಂದ ಆರಂಭವಾಗಿರುವ ಈ ಶಿಬಿರವು ದಿನಾಂಕ 30-06-2026 ರವರೆಗೆ ಲಭ್ಯವಿರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

 

ಶಿಬಿರದ ಸಮಯ ಮತ್ತು ತಜ್ಞ ವೈದ್ಯರು ಸಮಯ: ಬೆಳಗ್ಗೆ 9.00 ರಿಂದ ರಾತ್ರಿ 9.00 ರವರೆಗೆ ಉಚಿತ ತಪಾಸಣೆ ಮತ್ತು ಆಪ್ತಸಮಾಲೋಚನೆ ಇರಲಿದೆ.
ತಜ್ಞ ವೈದ್ಯರು: ಈ ಶಿಬಿರದಲ್ಲಿ ಅನುಭವೀ ತಜ್ಞ ವೈದ್ಯರಾದ ಡಾ. ನವೀನ್ ಬಿ. ಸಜ್ಜನ್ (M.S. Ayu) ಹಾಗೂ ಡಾ. ಜಗದೀಶ್ ಎಲ್. (M.D. Ayu) ಅವರು ರೋಗಿಗಳನ್ನು ತಪಾಸಣೆ ನಡೆಸಿ, ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ.

ಯಾವೆಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯ?
ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ನಿತ್ಯ ಬೆಳಗ್ಗೆ 7.00 ರಿಂದ ರಾತ್ರಿ 9.00 ರವರೆಗೆ ನಿಯಮಿತ ಚಿಕಿತ್ಸಾ ಸೇವೆಗಳು ಲಭ್ಯವಿದ್ದು, ಮುಖ್ಯವಾಗಿ ಈ ಕೆಳಗಿನ ಸಮಸ್ಯೆಗಳಿಗೆ ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತದೆ:

ವಿಶೇಷ ಚಿಕಿತ್ಸೆಗಳು: ಪಂಚಕರ್ಮ, ರಕ್ತಮೋಕ್ಷಣ ಚಿಕಿತ್ಸೆ ಮತ್ತು ಕ್ಷಾರಸೂತ್ರ ಚಿಕಿತ್ಸೆ. ವಾತ, ಪಿತ್ತ ಹಾಗೂ ಕಫ ದೋಷಗಳ ನಿವಾರಣೆ. ಅಲರ್ಜಿ, ಅಸ್ತಮಾ, ಚರ್ಮರೋಗಗಳು ಹಾಗೂ ಮಧುಮೇಹ/ಇತರ ಸಮಸ್ಯೆಗಳು. ಸಂಧಿವಾತ, ಸೊಂಟ ನೋವು ಮತ್ತು ಕುತ್ತಿಗೆ ನೋವು.ಕಿಡ್ನಿ ಮತ್ತು ಪಿತ್ತಕೋಶದ ಕಲ್ಲುಗಳು, ಹೊಟ್ಟೆ ಹುಣ್ಣು (ಅಲ್ಸರ್) ಹಾಗೂ ಅಜೀರ್ಣ ಸಮಸ್ಯೆ.ಮೂಲವ್ಯಾಧಿ (ಪೈಲ್ಸ್), ಗುದಭ್ರಂಶ, ಮಾಂಸದ ಗಂಟುಗಳು ಮತ್ತು ವೆರಿಕೋಸ್ ವೇನ್ಸ್. ಮೂತ್ರ ರೋಗಗಳು ಸೇರಿದಂತೆ ವಿವಿಧ ಜಟಿಲ ಕಾಯಿಲೆಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದೆ.

ಹೆಚ್ಚಿನ ಮಾಹಿತಿ ಮತ್ತು ಮುಂಗಡ ಬುಕಿಂಗ್‌ಗಾಗಿ ಸಂಪರ್ಕಿಸಿ:
ಸಾರ್ವಜನಿಕರು ಶಿಬಿರದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ತಮ್ಮ ಹೆಸರನ್ನು ಕಾಯ್ದಿರಿಸಲು ಆಸ್ಪತ್ರೆಯ ಮೊಬೈಲ್ ಸಂಖ್ಯೆಗಳಾದ 8971002744 ಅಥವಾ 9513908555 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now