Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ : ಬೈಕ್‍ಗಳಿಗೆ ಸಂಬಂಧಿಸಿದ ದಾಖಲೆ ಹಾಜರುಪಡಿಸಲು ಸಾರ್ವಜನಿಕರಿಗೆ ಸೂಚನೆ

---Advertisement---

ಚಿತ್ರದುರ್ಗ. ಫೆ.19 : ಕಳೆದ ಐದಾರು ವರ್ಷಗಳಿಂದ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಪೊಲೀಸರ ವಶದಲ್ಲಿರುವ 30 ಮೋಟಾರ್ ಸೈಕಲ್‍ಗಳ ವಾರಸುದಾರರ ಪತ್ತೆ ಮಾಡಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಬೈಕ್ ಕಳೆದುಕೊಂಡಿರುವ ಸಾರ್ವಜನಿಕರು, ಠಾಣೆಯ ಆವರಣದಲ್ಲಿರುವ ಮೋಟಾರ್ ಬೈಕ್‍ಗಳನ್ನು ಗುರುತಿಸಿ, ದಾಖಲೆಗಳನ್ನು ಹಾಜರುಪಡಿಸುವಂತೆ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸೂಚನೆ ನೀಡಿದ್ದಾರೆ.

 

ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಸುಮಾರು ಐದಾರು ವರ್ಷಗಳಿಂದ ಹೀರೋಹೋಂಡಾ, ಬಜಾಜ್, ಹೀರೋ, ಹೋಂಡಾ ಆಕ್ಟೀವಾ, ಟಿ.ವಿ.ಎಸ್ ಹಾಗೂ ಇತರೆ ಕಂಪನಿಗಳ ವಾರಸುದಾರರು ಪತ್ತೆಯಾಗದೇ ಇರುವ 30 ಮೋಟಾರ್ ಸೈಕಲ್‍ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಬೈಕ್‍ಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಚಿತ್ರದುರ್ಗದ 2ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಆದೇಶ ನೀಡಿರುತ್ತಾರೆ.

ನಿಯಮಾನುಸಾರ ವಿಲೇವಾರಿ ಮಾಡಲು ಕಾಲಮಿತಿ ಇರುವುದರಿಂದ, ಮೋಟಾರು ಬೈಕ್‍ಗಳನ್ನು ಕಳೆದುಕೊಂಡಿರುವ ಸಾರ್ವಜನಿಕರು, ವಾರಸುದಾರರು ಕೋಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯ ಆವರಣದಲ್ಲಿರುವ ಬೈಕ್‍ಗಳನ್ನು ಗುರುತಿಸಿ, 10 ದಿನಗಳ ಒಳಗಾಗಿ ದಾಖಲಾತಿಗಳನ್ನು ಹಾಜರುಪಡಿಸಿದಲ್ಲಿ, ನಿಯಮಾನುಸಾರ ಸಂಬಂಧಿಸಿದ ವಾರಸುದಾರರಿಗೆ ಬೈಕ್ ಅನ್ನು ಬಿಟ್ಟುಕೊಡಲಾಗುವುದು.  ಒಂದು ವೇಳೆ ಬೈಕ್‍ಗಳನ್ನು ಕಳೆದುಕೊಂಡಿರುವ ಸಾರ್ವಜನಿಕರು, ವಾರಸುದಾರರು ಯಾರೂ ಸಹ 10 ದಿನಗಳ ಒಳಗಾಗಿ ದಾಖಲೆಗಳನ್ನು ಹಾಜರುಪಡಿಸದೇ ಇದ್ದಲ್ಲಿ, ಅಂತಹ ಬೈಕ್‍ಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಬೆಲೆ ನಿಗದಿಮಾಡಿಸಿಕೊಂಡು, ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...