ಸುದ್ದಿಒನ್, ಚಿತ್ರದುರ್ಗ, ಜೂನ್. 30 : ತಾಲ್ಲೂಕಿನ ಆಯಿತೋಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಂಚಪ್ಪ.ಎನ್.ಕೆ ಅವರು ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಬೀಳ್ಕೊಡಲಾಯಿತು.
ಸುಮಾರು 18 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಇದೇ ಶಾಲೆಯಲ್ಲಿಯೇ ಸಲ್ಲಿಸಿ ಇಂದು ವಯೋನಿವೃತ್ತಿ ಹೊಂದಿದರು. ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಇಂಥ ವೃತ್ತಿಯಲ್ಲಿ ಇಷ್ಟು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಬದುಕು ಸುಖಮಯವಾಗಿರಲಿ. ಅವರ ನಿವೃತ್ತಿ ಜೀವನ ಸುಖಕರವಾಗಿಲೆಂದು ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ಶಿಷ್ಯ ಬಳಗ, ಸಮಸ್ತ ಊರಿನ ಗ್ರಾಮಸ್ಥರು ಹಾಗೂ ಬಂಧು ಮಿತ್ರರು ಶುಭ ಕೋರಿದರು.















