Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಗೋನೂರಿನ ನಿರಾಶ್ರಿತರ ಪರಿಹಾರ ಕೇಂದ್ರದ 25 ಅಂಧರ ಬಾಳಿಗೆ ಬೆಳಕಾದ ಡಾ. ಪ್ರದೀಪ್

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ದೃಷ್ಟಿ ಇಲ್ಲದೆ ಬದುಕುವುದು ದೊಡ್ಡ ನೋವು. ಒಂದು ಸಣ್ಣ ಶಸ್ತ್ರಚಿಕಿತ್ಸೆಯಿಂದ ಯಾರಾದರೂ ಮತ್ತೆ ನೋಡಲು ಸಾಧ್ಯವಾದರೆ, ಅದಕ್ಕಿಂತ ದೊಡ್ಡ ಸಂತೋಷ ವೈದ್ಯರಿಗೆ ಮತ್ತಿಲ್ಲ. ಪ್ರತಿಯೊಬ್ಬ ಮಾನವನಿಗೂ ನೋಡಲು ಹಕ್ಕಿದೆ” ಎಂದು ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ ಪ್ರದೀಪ್ ಬಿ.ಜಿ ಹೇಳಿದರು.

ಗೋನೂರುನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ
ಜಿಲ್ಲಾ ಆಸ್ಪತ್ರೆ ವತಿಯಿಂದ, ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಇಂದು 25 ಜನರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನೆಡಸುವುದರ ಮೂಲಕ  ನಿರಾಶ್ರಿತರ ಬಾಳಲ್ಲಿ  ಬೆಳಕಾಗಿ ಬೆಳಕಾದರು.

ಶಸ್ತ್ರಚಿಕಿತ್ಸೆ ಒಳಗೊಂಡ ಎಲ್ಲರೂ ಈ ಬಾರಿ ಯುಗಾದಿ   ಹಾಗೂ ರಂಜಾನ್ ಹಬ್ಬವನ್ನು ಕಷ್ಟಪಡದೆ ಬರಿಗಣ್ಣಿನಿಂದ ಚಂದ್ರವನ್ನು ನೋಡಿ ಆಚರಿಸಲಿ ಎಂದು ಶುಭ ಹಾರಿಸಿದರು.

ಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಗಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡ ಫಲಾನುಭವಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು  ಅನುಸರಿಸಬೇಕೆಂದು ಅವರು ತಿಳಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸಂಯೋಜಕರು ಡಾ ಚಂದ್ರಶೇಖರ್ ರಾಜು ಅವರು ಮಾತನಾಡುತ್ತಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆಡೆರಡು ವರ್ಷದಲ್ಲಿ 39 ಜನ ನಿರಾಶ್ರಿತರಿಗೆ ಹಾಗೂ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಡಾ ಪ್ರದೀಪ್ ನಡೆಸಿದ್ದು, ಇವರ ಕಾರ್ಯಗಳು ಶ್ಲಾಘನೀಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎಸ್ .ಪಿ. ರವೀಂದ್ರ  ಪ್ರಶಂಶಿಸಿದ್ದಾರೆ ಎಂದು ಹೇಳಿದರು.

ಲಾಭ ಪಡೆದ ರೋಗಿಗಳು , ಡಾ. ಪ್ರದೀಪ್ ಅವರಿಗೆ ಕೃತಜ್ಞತೆ ಸಲ್ಲಿಸಿ, “ನಮ್ಮ ಬದುಕಿಗೆ ಬೆಳಕು ತಂದ ದೇವರ ರೂಪದ ವೈದ್ಯರು” ಎಂದು ಭಾವಪೂರ್ಣವಾಗಿ ಕೊಂಡಾಡಿದರು.

ಹಾಗೆಯೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಸರ್ಕಾರದ ತಿಳುವಳಿಕೆ ಒಪ್ಪಂದದ ಮೇರೆಗೆ ಬೆಂಗಳೂರು ನಾರಾಯಣ ನೇತ್ರಾಲಯದ ತಂಡವು
32 ವಾರಗಳಿಗಿಂತ ಮುಂಚಿತವಾಗಿ ಜನಿಸುವ ಶಿಶುವು ಅಥವಾ ತೂಕ 1500 ಗ್ರಾಂ ಗಿಂತ  ಕಡಿಮೆ ಇದ್ದಲ್ಲಿ
ರೆಟಿನೋಪತಿ   ಆಫ್  ಪ್ರೀಮ್ಯಾಚುರಿಟಿ ( ROP ) ತಪಾಸಣೆ ನೆಡೆಸಲು ಬರುತ್ತಿದ್ದು  , ಈ  ಸೌಲಭ್ಯವನ್ನು ಚಿತ್ರದುರ್ಗದ ಜಿಲ್ಲೆಯ ಜನರು ಸದುಪಯೋಗ ಪಡೆಸಿಕೊಳ್ಳಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ
ಡಾ ಎಸ್ ಪಿ ರವೀಂದ್ರ ತಿಳಿಸಿದ್ದಾರೆ.

ಚಿಕಿತ್ಸಾ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ
ಡಾ ಎಸ್ ಪಿ ರವೀಂದ್ರ, , RMO ಡಾ ಆನಂದ್ ಪ್ರಕಾಶ್,
ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ
ಡಾ ನಾಗರಾಜ್, ನೇತ್ರಾಧಿಕಾರಿ  ಕೆ. ಸಿ.ರಾಮು,
ಶುಶ್ರೂಷಕರಾದ  ಲಕ್ಷ್ಮಿ , ಗಿರೀಶ್, ಸಿದ್ದು, ರಚನಾ,  ರಾಜೇಶ್ವರಿ, ಆಯೇಷಾ, ಗೀತ, ಅಮೃತ, ಐಶ್ವರ್ಯ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ನಿರಾಶ್ರಿತರ ಕೇಂದ್ರದ ವ್ಯವಸ್ಥಾಪಕ ಮಹದೇವಪ್ಪ ಹಾಗೂ ಮತ್ತಿತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...