Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಅಗ್ನಿ ಆಕಸ್ಮಿಕ, ಮನೆಗೆ ಬೆಂಕಿ,  ಗೃಹೋಪಯೋಗಿ ವಸ್ತುಗಳು ಆಹುತಿ : ವಿಡಿಯೋ ನೋಡಿ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ.26 : ಮನೆಯೊಂದರಲ್ಲಿ ಆಕ್ಮಸಿಕ ಅಗ್ನಿ ಅವಘಡ ಸಂಭವಿಸಿ ಬಟ್ಟೆ-ಬರೆ ಸೇರಿದಂತೆ ಅಪಾರ ಪ್ರಮಾಣದ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಜೆ ನಗರದ ಮುನ್ಸಿಪಲ್ ಕಾಲೋನಿಯಲ್ಲಿ ನಡೆದಿದೆ.

ನಗರದ ಎಸ್ ಪಿ ಕಚೇರಿಯ ಮುಂಭಾಗದ ರಸ್ತೆಯ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಳಿ ಇರುವ ಶಿವಪ್ರಕಾಶ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದೆ.  ಯುಪಿಎಸ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕ ಬೆಂಕಿ ಹೊತ್ತಿ ಕೊಂಡಿದೆ. ಮನೆಯವರೆಲ್ಲರೂ ಹಾಲು ರಾಮೇಶ್ವರ ದೇವಸ್ಥಾನಕ್ಕೆ ಹೋಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಈ ಘಟನೆ ಸಂಭವಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಬಾರಿ ದುರಂತ ತಪ್ಪಿದಂತಾಗಿದೆ. ನೆರೆಹೊರೆಯವರ ಗಮನಕ್ಕೆ ಬಂದ ತಕ್ಷಣವೇ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿ, ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದರು.

ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು. ಅಷ್ಟರಲ್ಲೇ ಮನೆಯಲ್ಲಿನ ಬಹುತೇಕ ವಸ್ತುಗಳು ಸುಟ್ಟು ಹಾನಿಯಾಗಿದ್ದವು. ಬೆಂಕಿಯ ಕೆನ್ನಾಲಿಗೆಗೆ ಬಟ್ಟೆಗಳು, ಹಾಸಿಗೆ, ದವಸ-ಧಾನ್ಯಗಳು, ಗೃಹಪಯೋಗಿ ವಸ್ತುಗಳು, ಪಿಠೊಪಕರಣಗಳು ಮತ್ತು ಮಕ್ಕಳ ಪುಸ್ತಕಗಳು ನಾಶವಾಗಿದೆ.

ವಿಷಯ ತಿಳಿದು ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...